1
ಇರಾನ್ ಕಮಾಂಡೊಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದ ಇಸ್ರೇಲ್ ಮೂಲದ ಹಡಗಿನಲ್ಲಿದ್ದ ಮಹಿಳೆ ಸೇರಿದಂತೆ 17 ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
ಏಪ್ರಿಲ್ 13ರಂದು ಇಸ್ರೇಲ್ ಮೂಲದ ಹಡಗಿನ ಮೇಲೆ ಇರಾನ್ ದಾಳಿ ನಡೆಸಿ ಸರಕು ಸಾಗಾಣೆ ಹಡಗನ್ನು ವಶಕ್ಕೆ ಪಡೆಯಲಾಗಿತ್ತು. ಹಡಗಿನಲ್ಲಿ ಭಾರತೀಯ ಸಿಬ್ಬಂದಿ ಇರುವುದು ತಿಳಿದ ಭಾರತದ ಸರ್ಕಾರದ ಪ್ರತಿಕ್ರಿಯೆಗೆ ಸ್ಪಂದಿಸಿದ್ದ ಇರಾನ್ ಸರ್ಕಾರ ಭಾರತೀಯರನ್ನು ಭಾರತಕ್ಕೆ ಹಸ್ತಾಂತರಿಸಿತು.