Thursday, September 19, 2024
Google search engine
Homeಕ್ರೀಡೆಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 2 ಪದಕ: ಅವಾನಿಗೆ ಚಿನ್ನ, ಮೋನಾಗೆ ಕಂಚು!

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 2 ಪದಕ: ಅವಾನಿಗೆ ಚಿನ್ನ, ಮೋನಾಗೆ ಕಂಚು!

ಭಾರತದ ಅವಾನಿ ಲೆಖಾರಾ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಕೂಟದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಶುಕ್ರವಾರ ನಡೆದ 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಎಚ್1 ವಿಭಾಗದ ಫೈನಲ್ ನಲ್ಲಿ ಅವಾನಿ ಲೇಖಾರಾ 249.7 ಅಂಕ ಸಂಪಾದಿಸಿ ಚಿನ್ನದ ಪದಕಕ್ಕೆ ಗುರಿ ಇಟ್ಟರೆ, ಮೋನಾ ಅಗರ್ವಾಲ್ 228.7 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲಲು ವಿಫಲವಾದರೆ, ಪ್ಯಾರಾಲಿಂಪಿಕ್ಸ್ ನ ಮೊದಲ ದಿನವೇ ಭಾರತದ ಕ್ರೀಡಾಪಟುಗಳು ಒಂದು ಚಿನ್ನ ಸೇರಿದಂತೆ 2 ಪದಕ ಗೆದ್ದ ಭರ್ಜರಿ ಶುಭಾರಂಭ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments