Monday, September 16, 2024
Google search engine
Homeಅಪರಾಧ2000 ಕೋಟಿ ದರೋಡೆ: ದೇಶದ ಅತೀ ದೊಡ್ಡ ಕ್ರಿಸ್ಪೊ ಕರೆನ್ಸಿ ಹಗರಣ ಬಯಲು!

2000 ಕೋಟಿ ದರೋಡೆ: ದೇಶದ ಅತೀ ದೊಡ್ಡ ಕ್ರಿಸ್ಪೊ ಕರೆನ್ಸಿ ಹಗರಣ ಬಯಲು!

ಸಾವಿರಾರು ಜನರಿಗೆ ಸೇರಿದ್ದ ಸುಮಾರು 2000 ಕೋಟಿ ರೂ.(230 ದಶಲಕ್ಷ ಡಾಲರ್) ಮೌಲ್ಯದ ಕ್ರಿಸ್ಪೊ ಕೆರೆನ್ಸಿ ದೋಚಿರುವುದು ಬೆಳಕಿಗೆ ಬಂದಿದ್ದು, ಇದು ದೇಶದ ಇತಿಹಾಸದಲ್ಲೇ ದೊಡ್ಡ ಪ್ರಕರಣ ಎಂದು ಹೇಳಲಾಗಿದೆ.

ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಕ್ರಿಸ್ಪೋ ಕರೆನ್ಸಿ ದರೋಡೆ ಮಾಡಲಾಗಿದ್ದು, ವ್ಯಾಜಿರಿಕ್ಸ್ ಎಕ್ಸ್ ಚೇಂಜ್ ಮೂಲಕ ಸಾವಿರಾರು ಜನರ ಖಾತೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ದೋಚಿದ್ದಾರೆ.

ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೆಂಟ್ರಲ್ ಸೈಬರ್ ಕ್ರೈಂ ಪೋರ್ಟಲ್, ಫೈನಾನ್ಸಿಯಲ್ ಇಂಟಲಿಜೆನ್ಸ್ ಯೂನಿಟ್ ಕ್ರಿಸ್ಪೊ ಕೆರೆನ್ಸಿ ದರೋಡೆ ದೃಢಪಡಿಸಿದ್ದು, ಈ ಪ್ರಕರಣದ ಹಿಂದೆ ಬೆನ್ನು ಬಿದ್ದಿದ್ದಾರೆ.

ಪೆಲರೂಸ್ ಟೆಕ್ನಾಲಜಿ ಮತ್ತು ಕ್ರಿಸ್ಟಲ್ ಇಂಟಲಿಜೆನ್ಸ್ ಗಳು ತನಿಖೆಗೆ ಸಹಕರಿಸುತ್ತಿವೆ. ಈ ಸಂಸ್ಥೆಗಳ ನೆರವಿನಿಂದ ವಂಚನೆ ಆಗಿರುವ ಮೊತ್ತದ ಅಂದಾಜು ಸಿಕ್ಕಿದೆ. ಜುಲೈ 18ರ ವೇಳೆಗೆ ಸುಮಾರು 200 ವರ್ಗಾವಣೆಗಳು ಕಂಡು ಬಂದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments