Home ತಾಜಾ ಸುದ್ದಿ ಬೆಂಗಳೂರಿನಲ್ಲಿವೆ 2320 ಅನಧಿಕೃತ ಪಿಜಿ: ಮಾರ್ಗಸೂಚಿ ಉಲ್ಲಂಘಿಸಿದ 21 ಪಿಜಿಗಳಿಗೆ ಬೀಜ ಜಡಿದ ಬಿಬಿಎಂಪಿ

ಬೆಂಗಳೂರಿನಲ್ಲಿವೆ 2320 ಅನಧಿಕೃತ ಪಿಜಿ: ಮಾರ್ಗಸೂಚಿ ಉಲ್ಲಂಘಿಸಿದ 21 ಪಿಜಿಗಳಿಗೆ ಬೀಜ ಜಡಿದ ಬಿಬಿಎಂಪಿ

by Editor
0 comments
bengaluru pg

ನಗರದಲ್ಲಿ ಪಾಲಿಕೆಯ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಬೆಂಗಳೂರು ಬೃಹತ್ ನಗಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಪಿಜಿಗಳಿಗೆ ಭೇಟಿ ನೀಡಿ ಪಾಲಿಕೆ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.

2193 ಅಧಿಕೃತ ಪಿಜಿ:

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2193 ಅಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1578 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿದ್ದು, 615 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದಿಲ್ಲ. ಮಾರ್ಗಸೂಚಿ ಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿ ಇಲ್ಲಿಯವರೆಗೆ 1011 ಅಧಿಕೃತ ಪಿ.ಜಿ. ಗಳಿಗೆ ನೋಟೀಸ್‌ನ್ನು ಜಾರಿ ಮಾಡಲಾಗಿರುತ್ತದೆ.

banner

2320 ಅನಧಿಕೃತ ಪಿಜಿ:

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2320 ಅನಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1674 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿರುತ್ತಾರೆ. 646 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದಿಲ್ಲ. ಮಾರ್ಗಸೂಚಿ ಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿ ಇಲ್ಲಿಯವರೆಗೆ 2320 ಅಧಿಕೃತ ಪಿ.ಜಿ. ಗಳಿಗೆ ನೋಟೀಸ್‌ನ್ನು ಜಾರಿ ಮಾಡಲಾಗಿರುತ್ತದೆ.

21 ಪಿ.ಜಿ.ಗಳಿಗೆ ಬೀಗ:

ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹಾಗೂ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ ಉದ್ದಿಮೆಗಳಿಗೆ 2/3 ಬಾರಿ ನೋಟೀಸ್ ನೀಡಿದ್ದರೂ ಕೂಡಾ ಯಾವುದೇ ಕ್ರಮಗಳನ್ನು ಪಾಲಿಸುಲುವಲ್ಲಿ ವಿಫಲರಾಗಿರುತ್ತಾರೆ. ಈ ಸಂಬಂಧ ಪಿಜಿಗಳನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಮತ್ತು 308ರಡಿಯಲ್ಲಿ ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅಧಿಕೃತ ಪಿಜಿ ಹಾಗೂ 20 ಅನಧಿಕೃತ ಸೇರಿ 21 ಪಿಜಿಗಳು ಮಾರ್ಗಸೂಚಿ ಅನುಸರಿಸದೇ ಇರುವ ಕಾರಣ ಮುಚ್ಚಲಾಗಿದೆ.

ಪೇಯಿಂಗ್ ಗೆಸ್ಟ್ ಗಳು ಅನುಸರಿಸಬೇಕಾದ ಮಾರ್ಗಸೂಚಿಗಳು:

ಪಾಲಿಕೆ ವ್ಯಾಪ್ತಿಯಲ್ಲಿರುವ ಪೇಯಿಂಗ್ ಗೆಸ್ಟ್ ಗಳಿಗೆ ಉದ್ದಿಮೆ ಪರವಾನಗಿಯನ್ನು ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

  1. ಪೇಯಿಂಗ್ ಗೆಸ್ಟ್ ಗಳ ಪ್ರವೇಶ, ನಿರ್ಗಮನ ಮತ್ತು ಆವರಣಗಳ ಸುತ್ತಮುತ್ತಲೂ ನಡೆಯುವ ಘಟನೆಗಳನ್ನು ಚಿತ್ರೀಕರಿಸುವ ಸಿ.ಸಿ ಟಿ.ವಿ. ಗಳನ್ನು ಅಳವಡಿಸಿ, ಸಿ.ಸಿ ಟಿ.ವಿ ವೀಡಿಯೋ ಮತ್ತು ಫೋಟೇಜ್‌ಗಳನ್ನು 30 ದಿನಗಳ ಬ್ಯಾಕಪ್ ಇರುವಂತೆ ಅಳವಡಿಸುವುದು.
  2. ವಾಸಕ್ಕೆ ಸಂಬಂಧಿತ ಕಟ್ಟಡದ ನಿಯಮಗಳ ಪ್ರಕಾರ, ಪ್ರತಿಯೊಬ್ಬ ನಿವಾಸಿಯು ತಲಾ 70 ಚದರ ಅಡಿಗಳಿಗಿಂತ ಕನಿಷ್ಠ ಜಾಗವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ / ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಿಗೆಯನ್ನು ನೀಡತಕ್ಕದ್ದು.
  3. ಪೇಯಿಂಗ್ ಗೆಸ್ಟ್ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಬೇಕು.
  4. ಪೇಯಿಂಗ್ ಗೆಸ್ಟ್ ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರಬೇಕು. ಪ್ರತಿಯೊಬ್ಬ ನಿವಾಸಿಗೆ 135 ಲೀಟರ್ ನೀರಿನ ಲಭ್ಯತೆ ಇರುವುದನ್ನು ಮಾಲೀಕರು / ಉದ್ದಿಮೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.
  5. ಪೇಯಿಂಗ್ ಗೆಸ್ಟ್ ಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 03 ತಿಂಗಳ ಅವಧಿಯೊಳಗೆ FSSAI ಇಲಾಖೆಯಿಂದ ಲೈಸೆನ್ಸ ಅನ್ನು ಪಡೆದುಕೊಳ್ಳತಕ್ಕದ್ದು.
  6. ಉದ್ದಿಮೆದಾರರು / ಮಾಲೀಕರು ಪೇಯಿಂಗ್ ಗೆಸ್ಟ್ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಠ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಿರತಕ್ಕದ್ದು.
  7. ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
  8. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ : 1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ : 101 ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
  9. ಪೇಯಿಂಗ್ ಗೆಸ್ಟ್ ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Kits) ಗಳನ್ನು ಅಳವಡಿಸಿರತಕ್ಕದ್ದು.
  10. ಪೇಯಿಂಗ್ ಗೆಸ್ಟ್ ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಿಸಲು ಕ್ರಮವಹಿಸತಕ್ಕದ್ದು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು! ಐಪಿಎಲ್‌ ಹರಾಜಿನಲ್ಲಿ ಸೇಲಾದ 13 ಕನ್ನಡಿಗರು: ಮಯಾಂಕ್ ಕಡೆಗಣನೆ! Goutam Gambhir ಮೊದಲ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮರಳಿದ ಗಂಭೀರ್! Pakistan ಇಮ್ರಾನ್ ಖಾನ್ ಬೆಂಬಲಿಗರಿಂದ ಧಂಗೆ: ಕಂಡಲ್ಲಿ ಗುಂಡಿಕ್ಕಲು ಆದೇಶ