Sunday, October 6, 2024
Google search engine
Homeತಾಜಾ ಸುದ್ದಿಬಸ್ ಪಲ್ಟಿ ಹೊಡೆದು 40 ಶಾಲಾ ಮಕ್ಕಳಿಗೆ ಗಾಯ

ಬಸ್ ಪಲ್ಟಿ ಹೊಡೆದು 40 ಶಾಲಾ ಮಕ್ಕಳಿಗೆ ಗಾಯ

ವೇಗವಾಗಿ ಹೋಗುತ್ತಿದ್ದ ಸರ್ಕಾರಿ ಬಸ್ ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ 40 ಶಾಲಾ ಮಕ್ಕಳು ಗಾಯಗೊಂಡ ಘಟನೆ ಹರಿಯಾಣದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಪಂಚಕುಲಾದಲ್ಲಿ ಈ ಘಟನೆ ಸಂಭವಿಸಿದ್ದು, ಪಿಂಜೊರೆ ಜಿಲ್ಲೆಯ ನೌಟ್ಲಾ ಗ್ರಾಮದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹರಿಯಾಣ ರೋಡ್ ವೇ ಬಸ್ ವೇಗವಾಗಿ ಹೋಗುತ್ತಿದ್ದರಿಂದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಅಲ್ಲದೇ ರಸ್ತೆ ಗುಣ ಹಾಳಾಗಿ ಗುಂಡಿ ಬಿದ್ದಿದ್ದು ಕೂಡ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಬಸ್ ನಲ್ಲಿ ಸುಮಾರು 70 ಮಂದಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments