ಸಂಘಟಿತ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ 59 ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 44.3 ಓವರ್ ಗಳಲ್ಲಿ 227 ರನ್ ಗೆ ಆಲೌಟಾಯಿತು. ಟಿ-20 ವಿಶ್ವಕಪ್ ಗೆದ್ದು ಸಂಭ್ರಮದಲ್ಲಿದ್ದ ನ್ಯೂಜಿಲೆಂಡ್ ವನಿತೆಯರು 40.4 ಓವರ್ ಗಳಲ್ಲಿ 168 ರನ್ ಗೆ ಆಲೌಟಾಯಿತು.
ಭಾರತದ ಪರ ರಾಧ ಯಾದವ್ ಮೂರು ವಿಕೆಟ್ ಪಡೆದರೆ, ಸೀಮಾ ಥಾಕೂರ್ 2 ವಿಕೆಟ್ ಪಡೆದು ಮಿಂಚಿದರು. ಕಿವೀಸ್ ಪರ ಬ್ರೂಕ್ ಹ್ಯಾಲಿಡೇ (39), ಮ್ಯಾಡಿ ಗ್ರೀನ್ (32), ಲೂರನೆ ಡೌನ್ (26) ಮತ್ತು ಜಾರ್ಜಿಯಾ ಪ್ಲಿಮ್ಮರ್ (25) ಮಾತ್ರ ಸ್ವಲ್ಪಮಟ್ಟಿಗೆ ಹೋರಾಟ ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ವನಿತಯರ ತಂಡ ಸ್ಪಿನ್ನರ್ ಅಮೆಲಾ ಖೇರ್ (42/4) ದಾಳಿಗೆ ತತ್ತರಿಸಿದರೂ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಯಶಸ್ವಿಯಾದರು. ತಂಡದ ಪರ ತೇಜಲ್ ಹಸಬೈನ್ಸ್ (42), ದೀಪ್ತಿ ಶರ್ಮ (41), ಜೆಮಿಹಾ ರೋಡ್ರಿಗಜ್ (35), ಯಸ್ತಿಕಾ ಭಾಟಿಯಾ (37), ಶೆಫಾಲಿ ಶರ್ಮ (33) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.