Monday, September 16, 2024
Google search engine
Homeಅಪರಾಧಕೋಲಾರದಲ್ಲಿ ಶಿಕ್ಷಕಿ ಕೊಂದ 6 ಮಂದಿ ಅಪ್ರಾಪ್ತರು ತಿರುಪತಿಯಲ್ಲಿ ಅರೆಸ್ಟ್!

ಕೋಲಾರದಲ್ಲಿ ಶಿಕ್ಷಕಿ ಕೊಂದ 6 ಮಂದಿ ಅಪ್ರಾಪ್ತರು ತಿರುಪತಿಯಲ್ಲಿ ಅರೆಸ್ಟ್!

ಕೋಲಾರದಲ್ಲಿ ಶಿಕ್ಷಕಿಯ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ 6 ಮಂದಿ ಅಪ್ರಾಪ್ತರನ್ನು ತಿರುಪತಿಯಲ್ಲಿ ಬಂಧಿಸಲಾಗಿದೆ.

ಕಳೆದ ವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುತ್ಯಾಲಪೇಟೆ ಬಡಾವಣೆಯಲ್ಲಿ ಟಿವಿ ನೋಡುತ್ತಾ ಕೂತಿದ್ದ ಶಿಕ್ಷಕಿ ದಿವ್ಯಾಶ್ರೀ (34) ಅವರನ್ನು ಹತ್ಯೆಗೈಯ್ಯಲಾಗಿತ್ತು. ಘಟನೆ ವೇಳೆ ಮನೆಯಲ್ಲಿ ಮಗಳು ಕೂಡ ಇದ್ದು, ಮಗಳು ಆಕಸ್ಮಿಕವಾಗಿ ಪಾರಾಗಿದ್ದಾರೆ. ಹತ್ಯೆ ಪ್ರಕರಣ ಖಂಡಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು.

ಪ್ರಕರಣದ ಬೆನ್ನು ಬಿದ್ದಿದ್ದ ಪೊಲೀಸರು ಅಪ್ರಾಪ್ತ ವಯಸ್ಸಿನ 6 ಮಂದಿ ಆರೋಪಿಗಳನ್ನು ತಿರುಪತಿಯಲ್ಲಿ ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಕೃತ್ಯದ ಹಿಂದಿನ ಕಾರಣ ಸೇರಿದಂತೆ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments