Sunday, September 22, 2024
Google search engine
Homeಕ್ರೀಡೆಅಶ್ವಿನ್ ಗೆ 6 ವಿಕೆಟ್: ಚೆನ್ನೈ ಟೆಸ್ಟ್ ನಲ್ಲಿ ಭಾರತಕ್ಕೆ 280 ರನ್ ಭಾರೀ ಜಯ

ಅಶ್ವಿನ್ ಗೆ 6 ವಿಕೆಟ್: ಚೆನ್ನೈ ಟೆಸ್ಟ್ ನಲ್ಲಿ ಭಾರತಕ್ಕೆ 280 ರನ್ ಭಾರೀ ಜಯ

ಸ್ಪಿನ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ 6 ವಿಕೆಟ್ ನೆರವಿನಿಂದ ಬಾಂಗ್ಲಾದೇಶ ತಂಡವನ್ನು 280 ರನ್ ಗಳಿಂದ ಸೋಲಿಸಿದ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.

ಚೆನ್ನೈನಲ್ಲಿ ನಡೆದ ಪಂದ್ಯ ಗೆಲ್ಲಲು 515 ರನ್ ಗಳ ಕಠಿಣ ಸವಾಲು ಪಡೆದಿದ್ದ ಬಾಂಗ್ಲಾದೇಶ ನಾಲ್ಕನೇ ದಿನವಾದ ಭಾನುವಾರ 4 ವಿಕೆಟ್ ಗೆ 154 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ ಭೋಜನ ವಿರಾಮಕ್ಕೂ ಮುನ್ನವೇ 234 ರನ್ ಗೆ ಆಲೌಟಾಯಿತು.

ಭಾರತದ ಪರ ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿ ಆಸರೆಯಾಗಿದ್ದ ಅಶ್ವಿನ್ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಮಿಂಚಿದರು. ಇದು ಅಶ್ವಿನ್ ಗೆ 37ನೇ ಬಾರಿ ಒಲಿದ 5 ವಿಕೆಟ್ ಗೊಂಚಲು ಆಗಿದೆ. ಅಲ್ಲದೇ ಆಸ್ಟ್ರೇಲಿಯಾದ ದಂತಕತೆ ಶೇನ್ ವಾರ್ನ್ ದಾಖಲೆಯನ್ನು ಸರಿಗಟ್ಟಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments