Monday, September 16, 2024
Google search engine
Homeತಾಜಾ ಸುದ್ದಿಕೇಂದ್ರದ ಸ್ವಚ್ಛ ಭಾರತ್ ನಿಂದ 70,000 ನವಜಾತ ಶಿಶುಗಳ ಸಾವಿನ ಪ್ರಮಾಣ ಕುಸಿತ!

ಕೇಂದ್ರದ ಸ್ವಚ್ಛ ಭಾರತ್ ನಿಂದ 70,000 ನವಜಾತ ಶಿಶುಗಳ ಸಾವಿನ ಪ್ರಮಾಣ ಕುಸಿತ!

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಸ್ವಚ್ಛ ಭಾರತ್ ಯೋಜನೆಯಡಿ ಪ್ರತಿ ವರ್ಷ ಸುಮಾರು 60ರಿಂದ 70 ಸಾವಿರ ನವಜಾತ ಶಿಶುಗಳ ಸಾವು ಪ್ರಕರಣಗಳು ಕಡಿಮೆ ಆಗಿವೆ ಎಂದು ವರದಿ ಹೇಳಿದೆ.

ಅಮೆರಿಕ ಮೂಲದ ಅಂತಾರಾಷ್ಟ್ರೀಯ ಆಹಾರ ಮತ್ತು ಸುರಕ್ಷತಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಿಸಿದ ಶೌಚಾಲಯ ಹಾಗೂ ಒಳಚರಂಡಿ ವ್ಯವಸ್ಥೆ ಸುಧಾರಣೆಯಿಂದ ಸಾವಿನ ಪ್ರಕರಣದಲ್ಲಿ ಕುಸಿತ ಉಂಟಾಗಿದೆ ಎಂದು ಹೇಳಿದೆ.

ಕಳೆದ 10 ವರ್ಷಗಳಲ್ಲಿ 35 ರಾಜ್ಯದ 640 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಲಾಗಿದೆ.

2003ರಿಂದ 2008ರ ಅವಧಿಯಲ್ಲಿ ದೇಶದಲ್ಲಿ ಶೇ.40 ರಷ್ಟು ಶೌಚಾಲಯಗಳಿದ್ದವು. 2015ರ ವೇಳೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಕಂಡು ಬಂದಿದ್ದು, 2020ರ ವೇಳೆಗೆ ಶೇ.60 ರಷ್ಟು ಶೌಚಾಲಯಗಳು ನಿರ್ಮಾಣವಾಗಿವೆ.

ಶೇ.19ರಷ್ಟು ಶೌಚಾಯಲಗಳ ನಿರ್ಮಾಣದಿಂದ ಗ್ರಾಮೀಣ‌ ಪ್ರದೇಶಗಳಲ್ಲಿ ಶೇ.0.9 ರಷ್ಟು ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಕಡಿಮೆ ಆಗಿದ್ದರೆ 5 ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣದಲ್ಲಿ ಶೇ.1.1ರಷ್ಟು ಕುಸಿತ ಉಂಟಾಗಿದೆ ಎಂದು ವರದಿ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments