ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 7.77 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅತೀ ಹೆಚ್ಚು ಅಪಘಾತಕ್ಕೆ ಬಲಿಯಾದವರ 10 ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.
ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ 2018-2022ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಪಘಾತಗಳ ರಾಜ್ಯವಾರು ಪಟ್ಟಿಯನ್ನು ವಿವರ ಬಹಿರಂಗಪಡಿಸಿದೆ.
2022ರಲ್ಲಿ 1,68,491 ಜನರು ಅಪಘಾತಗಳಿಂದ ಮೃತಪಟ್ಟಿದ್ದಾರೆ. 2021ರಲ್ಲಿ 1,53,927 ಮಂದಿ ಮೃತಪಟ್ಟಿದ್ದರು. ಅಪಘಾತಗಳು ಬಹುತೇಕ ಅತೀ ವೇಗ, ಮದ್ಯಸೇವನೆ ವಾಹನ ಚಾಲನೆ, ಚಾಲಕನ ಅಜಾಗರೂಕತೆಗಳಿಂದ ಸಂಭವಿಸಿವೆ.
ಅತೀ ಹೆಚ್ಚು ಅಪಘಾತಗಳಿಗೆ ಮೃತಪಟ್ಟವರ ಪಟ್ಟಿಯಲ್ಲಿ ಉತ್ತರ ಪ್ರದೇಶಕ್ಕೆ ಅಗ್ರಸ್ಥಾನ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ 2022ರಲ್ಲಿ 22,595 ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 17,884 ಅಸುನೀಗಿದ್ದಾರೆ.
ಕರ್ನಾಟಕದಲ್ಲಿ 53,448 ಮಂದಿ ಅಪಘಾತಕ್ಕೆ ಬಲಿಯಾಗಿದ್ದು, ಅತೀ ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳಲ್ಲಿ 5ನೇ ಸ್ಥಾನ ಪಡೆದಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ರಸ್ತೆ ಅಗಲೀಕರಣ ಮುಂತಾದ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಮನುಷ್ಯರಲ್ಲಿ ಬದಲಾವಣೆ ಆಗದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಷಾದಿಸಿದ್ದಾರೆ.
ಅಪಘಾತದಿಂದ ಮೃತಪಟ್ಟ ಅಗ್ರ 10 ರಾಜ್ಯಗಳು
- ಉತ್ತರ ಪ್ರದೇಶ 1,08,882
- ತಮಿಳುನಾಡು 84,316
- ಮಹಾರಾಷ್ಟ್ರ 66,370
- ಮಧ್ಯಪ್ರದೇಶ 58,580
- ಕರ್ನಾಟಕ 53,448
- ರಾಜಸ್ಥಾನ 51,280
- ಆಂಧ್ರಪ್ರದೇಶ 39,058
- ಬಿಹಾರ 36,191
- ತೆಲಂಗಾಣ 35,565
- ಗುಜರಾತ್ 36,626