Thursday, September 19, 2024
Google search engine
Homeತಾಜಾ ಸುದ್ದಿವಕ್ಫ್ ಜಂಟಿ ಸಂಸದೀಯ ಸಮಿತಿಯಲ್ಲಿ 8 ಬಿಜೆಪಿ ಸದಸ್ಯರು! ವೀರೇಂದ್ರ ಹೆಗ್ಗಡೆಗೂ ಸ್ಥಾನ!

ವಕ್ಫ್ ಜಂಟಿ ಸಂಸದೀಯ ಸಮಿತಿಯಲ್ಲಿ 8 ಬಿಜೆಪಿ ಸದಸ್ಯರು! ವೀರೇಂದ್ರ ಹೆಗ್ಗಡೆಗೂ ಸ್ಥಾನ!

ಸಂಸತ್ ಅಧಿವೇಶನದಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇಮಕಗೊಂಡಿದ್ದು, ರಾಜ್ಯಸಭೆಯ ನಾಮ ನಿರ್ದೇಶಕರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸದಸ್ಯರಾಗಿ ಸ್ಥಾನ ಗಳಿಸಿದ್ದಾರೆ.

ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಗಸ್ಟ್ 8ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಸದನದಲ್ಲಿ ವ್ಯಾಪಕ ಚರ್ಚೆ ನಂತರ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಲಾಗಿದೆ.

31 ಸದಸ್ಯರ ತಾತ್ಕಾಲಿಕ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದ್ದು, 21 ಸದಸ್ಯರು ಲೋಕಸಭೆಯಿಂದ ಮತ್ತು 10 ಸದಸ್ಯರು ರಾಜ್ಯಸಭೆಯಿಂದ ಆಯ್ಕೆಯಾದವರು ಇದ್ದಾರೆ.

ಲೋಕಸಭೆಯಲ್ಲಿ ಜಂಟಿ ಸಂಸದೀಯ ಸಮಿತಿಯ 12 ಸದಸ್ಯರು ಆಡಳಿತಾರೂಢ ಎನ್‌ಡಿಎಯಿಂದ ಬಂದಿದ್ದು, ಅವರಲ್ಲಿ 8 ಮಂದಿ ಬಿಜೆಪಿಯವರು 9 ಸದಸ್ಯರು ವಿರೋಧ ಪಕ್ಷದ ಸದಸ್ಯರಾಗಿದ್ದಾರೆ.

ಬಿಜೆಪಿಯ ಸಂಸದರಾದ ಜಗದಾಂಬಿಕ ಪಾಲ್ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದರೆ. ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಅಭಿತ್ ಗಂಗೋಪಾಧ್ಯಾಯ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಡಿಕೆ ಅರುಣಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಸದಸ್ಯರಾದ ಗೌರವ್ ಗೊಗೊಯ್, ಇಮ್ರಾನ್ ಮಸೂದ್ ಮತ್ತು ಮೊಹಮ್ಮದ್ ಜಾವೇದ್ ಕೂಡ ಈ ಸಮಿತಿಯಲ್ಲಿದ್ದಾರೆ. ಮೊಹಿಬುಲ್ಲಾ (ಸಮಾಜವಾದಿ ಪಕ್ಷ), ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ಎ. ರಾಜಾ (ಡಿಎಂಕೆ), ಲವು ಶ್ರೀ ಕೃಷ್ಣ ದೇವರಾಯಲು (ತೆಲುಗು ದೇಶಂ ಪಕ್ಷ), ದಿಲೇಶ್ವರ್ ಕಾಮೈತ್ (ಜೆಡಿಯು), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಸುರೇಶ್ ಮ್ಹಾತ್ರೆ (ಎನ್‌ಸಿಪಿ-ಶರದ್ ಪವಾರ್), ನರೇಶ್ ಮ್ಹಾಸ್ಕೆ (ಶಿವಸೇನೆ), ಅರುಣ್ ಭಾರತಿ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್) ಮತ್ತು ಅಸಾದುದ್ದೀನ್ ಓವೈಸಿ (ಎಐಎಂಐಎಂ) ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಸಮಿತಿಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷದ ತಲಾ ನಾಲ್ವರು ರಾಜ್ಯಸಭಾ ಸದಸ್ಯರು ಮತ್ತು ಒಬ್ಬರು ನಾಮನಿರ್ದೇಶಕರು ಸ್ಥಾನ ಗಳಿಸಿದ್ದಾರೆ.

ರಾಜ್ಯಸಭೆಯಿಂದ ಸೇರ್ಪಡೆಗೊಂಡವರು ಬ್ರಿಜ್ ಲಾಲ್ (ಬಿಜೆಪಿ), ಮೇಧಾ ವಿಶ್ರಮ್ ಕುಲಕರ್ಣಿ (ಬಿಜೆಪಿ), ಗುಲಾಮ್ ಅಲಿ (ಬಿಜೆಪಿ), ರಾಧಾ ಮೋಹನ್ ದಾಸ್ ಅಗರವಾಲ್ (ಬಿಜೆಪಿ), ಸೈಯದ್ ನಸೀರ್ ಹುಸೇನ್ (ಕಾಂಗ್ರೆಸ್), ಮೊಹಮ್ಮದ್ ನಾದಿಮುಲ್ ಹಕ್ (ತೃಣಮೂಲ ಕಾಂಗ್ರೆಸ್), ವಿ. ವಿಜಯಸಾಯಿ ರೆಡ್ಡಿ (ವೈಎಸ್‌ಆರ್‌ಸಿಪಿ), ಎಂ. ಮೊಹಮದ್ ಅಬ್ದುಲ್ಲಾ (ಡಿಎಂಕೆ), ಸಂಜಯ್ ಸಿಂಗ್ (ಎಎಪಿ) ಮತ್ತು ನಾಮ ನಿರ್ದೇಶಿತ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸ್ಥಾನ ಗಳಿಸಿದ್ದಾರೆ.

8.5 ಲಕ್ಷ ಆಸ್ತಿಗಳನ್ನು ಒಳಗೊಂಡಿರುವ ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ಮಾಡಲು ಈ ಮಸೂದೆ ಶಿಫಾರಸು ಮಾಡಿದೆ. ಬಿಜೆಪಿಯ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ ಮತ್ತು ಜನತಾ ದಳ ಯುನೈಟೆಡ್ ಮಸೂದೆಗೆ ಸಂಪೂರ್ಣ ಬೆಂಬಲ ಘೋಷಿಸಿದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಎಐಎಂಐಎಂ ಸೇರಿದಂತೆ ಪ್ರತಿಪಕ್ಷಗಳು ವಿರೋಧಿಸಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments