Sunday, September 22, 2024
Google search engine
Homeತಾಜಾ ಸುದ್ದಿಬೆಂಗಳೂರಿನಲ್ಲಿ ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವು!

ಬೆಂಗಳೂರಿನಲ್ಲಿ ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವು!

ಮೈದಾನದ ಗೇಟ್ ಮುರಿದು ಬಿದ್ದ ಪರಿಣಾಮ 10 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ಭಾನುವಾರ ಸಂಭವಿಸಿದೆ.

ಮಲ್ಲೇಶ್ವರ ಬಿಬಿಎಂಪಿ ಮೈದಾನದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮಲ್ಲೇಶ್ವರ ಫೈಪ್‌ಲೈನ್‌ನಲ್ಲಿ ನಿವಾಸಿ ಆಟೋ ಚಾಲಕ ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮೊದಲನೇ ಪುತ್ರ ನಿರಂಜನ್ ಮೃತಪಟ್ಟಿದ್ದಾನೆ.

ಮಲ್ಲೇಶ್ವರನ ಬಿಬಿಎಂಪಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿರುವ ನಿರಂಜನ್, ಆಟವಾಡಲು ಮೈದಾನಕ್ಕೆ ಬಂದಿದ್ದ. ಬಾಲಕ ಗೇಟ್ ಬಳಿ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಬಾಲಕನ ತಲೆ ಮೇಲೆ ಮುರಿದು ಬಿದ್ದಿದೆ.

ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments