Friday, October 4, 2024
Google search engine
Homeತಾಜಾ ಸುದ್ದಿಮನೆಯ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವು

ಮನೆಯ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವು

ಹೆತ್ತವರು ಕೂಲಿ ಕೆಲಸಕ್ಕೆ ಹೋಗಿದ್ದಾಗ ಸಂಪ್ ಗೆ 5 ಬಾಲಕ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಅಯ್ಯಪ್ಪ ನಗರದಲ್ಲಿ ಸಂಭವಸಿದೆ.

ನೇಪಾಳ ಮೂಲದ ಸುಶೀಲ್ ದಂಪತಿಯ ಪುತ್ರ ಸಬೀನ್ (5) ಮೃತಪಟ್ಟ ಬಾಲಕ.

ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿಶಾಲ್ ಮಾರ್ಟ್ ಹಿಂಭಾಗದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ದಂಪತಿ ಕೂಲಿ ಕೆಲಸಕ್ಕಾಗಿ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಆದರೆ ಕೂಲಿ ಕೆಲಸ ಮುಗಿಸಿ ಮನೆಗೆ ಮರಳಿದ ನಂತರ ಮಗ ನಾಪತ್ತೆಯಾಗಿದ್ದರಿಂದ ಹುಡುಕಾಟ ನಡೆಸಿದ್ದು, ಸಂಪ್ ನಲ್ಲಿ ಬಾಲಕ ಶವ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಫಲ ನೀಡಿಲ್ಲ.

ಕೆಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮಗು ಆಟವಾಡುವಾಗ ಆಯತಪ್ಪಿ ಬಿದ್ದು ಮೃತಪಟ್ಟಿದೆಯೇ ಅಥವಾ ಸಾವು ಹೇಗೆ ಸಂಭವಿಸಿತು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments