ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತಾಗೆ ಬಂದಿದ್ದ ಬಾಂಗ್ಲಾದೇಶ ಸಂಸದ ಅಜ್ವರುಲ್ ಅಜಿಮ್ ಅನರ್ ನಾಪತ್ತೆಯಾಗಿದ್ದಾರೆ.
ಕೋಲ್ಕತಾ ಪೊಲೀಸರು ಕೋಲ್ಕತಾಗೆ ಬಂದಿಳಿದ ಬೆನ್ನಲ್ಲೇ ನಾಪತ್ತೆಯಾಗಿರುವ ಬಾಂಗ್ಲಾದೇಶ ಸಂಸದನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಪಕ್ಷದ ಸಂಸದ ಅಜ್ವರುಲ್ ಅಜಿಮ್ ಅನರ್ ಮೇ 12ರಂದು ಕೋಲ್ಕತಾಗೆ ಆಗಮಿಸಿದ್ದರು. ಅದರ ಬೆನ್ನಲ್ಲೇ ನಾಪತ್ತೆಯಾಗಿದ್ದಾರೆ.
ಅನ್ವರುಲ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಎರಡು ದಿನಗಳ ನಂತರ ದೂರು ಬಂದಿರುವುದರಿಂದ ಪೊಲೀಸರು ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿದ್ದು, ಬಾಂಗ್ಲಾದೇಶ ಸಂಸದನ ಕೊಲೆ ಮಾಡಿ ಮತ್ತೊಂದು ಪ್ರದೇಶದಲ್ಲಿ ಶವ ಎಸೆದು ದುಷ್ಕರ್ಮಿಗಳು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


