Thursday, November 14, 2024
Google search engine
Homeತಾಜಾ ಸುದ್ದಿಮಲತಾಯಿ ವಿರುದ್ಧ 50 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಿದ ಖ್ಯಾತ ನಟಿ!

ಮಲತಾಯಿ ವಿರುದ್ಧ 50 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಿದ ಖ್ಯಾತ ನಟಿ!

ಕಿರುತೆರೆಯ ಖ್ಯಾತ ನಟಿ ರೂಪಾಲಿ ಗಂಗೂಲಿ ಮಲತಾಯಿ ಇಶಾ ವರ್ಮಾ ವಿರುದ್ಧ 50 ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ರೂಪಾಲಿ ಗಂಗೂಲಿ ಜಾತಕದಲ್ಲಿ ಮೂಲ ನಕ್ಷತ್ರದ ದೋಷವಿದೆ ಎಂದು ಮಲತಾಯಿ ಇಶಾ ವರ್ಮಾ ನೀಡಿದ ಹೇಳಿಕೆ ವಿರುದ್ಧ ರೂಪಾ ಗಂಗೂಲಿ ಮಾನನಷ್ಟ ಮೊಕದ್ದಮೆ ನೋಟಿಸ್ ಜಾರಿ ಮಾಡಿದ್ದಾರೆ.

ರೂಪಾಲಿ ಅವರ ಕಾನೂನು ತಜ್ಞರ ತಂಡದ ಮುಖ್ಯಸ್ಥ ಸಾನಾ ರಹೀಸ್ ಖಾನ್ ರೂಪಾಲಿ ಅವರ ಮಲತಾಯಿ ನೀಡಿದ ಹೇಳಿಕೆ ಅತ್ಯಂತ ಗಂಭೀರವಾಗಿದ್ದು, ವೈಯಕ್ತಿಕವಾಗಿ ಹಾನಿ ಮಾಡುವಂತಹದ್ದಾಗಿದೆ. ಇದು ಸುಳ್ಳು ಹಾಗೂ ಆಧಾರ ರಹಿತ ಆರೋಪವಾಗಿದೆ ಎಂದು ಹೇಳಿದ್ದಾರೆ.

ಇಶಾ ವರ್ಮಾ ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ರೂಪಾಲಿ ಜಾತಕದಲ್ಲಿನ ದೋಷಗಳ ಬಗ್ಗೆ ಹೇಳಿದ್ದರು. ಇದನ್ನು ನೋಡಿ ಆಘಾತಕ್ಕೆ ಒಳಗಾದ ರೂಪಾಲಿ ಕಾನೂನು ಸಮರ ಹೂಡಲು ನಿರ್ಧರಿಸಿದ್ದಾರೆ.

ಕಿರುತೆರೆಯಲ್ಲಿ ಅನುಪಮ ಧಾರವಾಹಿಯಲ್ಲಿ ನಟಿಸುತ್ತಿರುವ ರೂಪಾಲಿ, ಇಂತಹ ಸುಳ್ಳು ಆರೋಪಗಳಿಂದ ಮಾನಸಿಕವಾಗಿ ನೊಂದಿದ್ದು, 11 ವರ್ಷದ ಪುತ್ರ ಹಾಗೂ ಪತಿ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments