ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದರೂ ಪದಕ ವಂಚಿತರಾದ ಕುಸ್ತಿಪಟು ವಿನೇಶ್ ಪೊಗಟ್ ಸ್ವದೇಶಕ್ಕೆ ಶನಿವಾರ ಬೆಳಿಗ್ಗೆ ಮರಳಿದರು.
ವಿನೇಶ್ ಪೊಗಟ್ ಅವರಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಕುಸ್ತಿಪಟು ಭಜರಂಗ್ ಪೂನಿಯಾ ಸೇರಿದಂತೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ಅಭಿಮಾನಿಗಳ ಸ್ವಾಗತದಿಂದ ವಿನೇಶ್ ಪೊಗಟ್ ಭಾವುಕರಾದರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಂದ ದೊರೆತ ಸ್ವಾಗತದಿಂದ ಭಾವುಕರಾದ ವಿನೇಶ್ ಪೊಗಟ್, ಎಲ್ಲಾ ಭಾರತೀಯರಿಗೆ ಧನ್ಯವಾದಗಳು ಎಂದು ಸಂತಸ ವ್ಯಕ್ತಪಡಿಸಿದರು.
50 ಕೆಜಿ ವಿಭಾಗದ ಫ್ರಿಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಪೊಗಟ್ 100 ಗ್ರಾಂ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಫೈನಲ್ ನಿಂದ ಅನರ್ಹಗೊಂಡಿದ್ದರು. ವಿನೇಶ್ ಪೊಗಟ್ ವೈಯಕ್ತಿಕವಾಗಿ ಹಾಗೂ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಒಲಿಂಪಿಕ್ಸ್ ಸಮಿತಿ ವಜಾಗೊಳಿಸಿತ್ತು.