Thursday, September 19, 2024
Google search engine
Homeತಾಜಾ ಸುದ್ದಿಫೋನ್ ಕಾಲ್ ನಲ್ಲಿ ಮೈಮರೆತು ತೊಳಿನ ಮಧ್ಯೆ ವಾಟರ್ ಹೀಟರ್ ಇಟ್ಟುಕೊಂಡ ವ್ಯಕ್ತಿ ಸಾವು!

ಫೋನ್ ಕಾಲ್ ನಲ್ಲಿ ಮೈಮರೆತು ತೊಳಿನ ಮಧ್ಯೆ ವಾಟರ್ ಹೀಟರ್ ಇಟ್ಟುಕೊಂಡ ವ್ಯಕ್ತಿ ಸಾವು!

ನೀರು ಕಾಯಿಸಲು ಹೋದ ವ್ಯಕ್ತಿ ಫೋನ್ ಕರೆ ಬಂದಿದ್ದರಿಂದ ಬಕೆಟ್ ನಲ್ಲಿ ವಾಟರ್ ಹೀಟರ್ ಇಡಲು ಬದಲು ತೋಳಿನ ಮಧ್ಯೆ ಇಟ್ಟುಕೊಂಡಿದ್ದರಿಂದ ಕರೆಂಟ್ ಹೊಡೆದು ಮೃತಪಟ್ಟ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ.

ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಖಮ್ಮಾಮ್ ಎಂಬ ಪ್ರದೇಶದ ಬಳಿಯ ಹನುಮಾನ್ ದೇವಸ್ಥಾನದ ಬಳಿಯ ನಿವಾಸಿ 40 ವರ್ಷದ ದೊನ್ನೆಪುಡಿ ಮಹೇಶ್ ಬಾಬು ಮೃತಪಟ್ಟಿದ್ದಾರೆ.

ನಾಯಿಗೆ ಸ್ನಾನ ಮಾಡಿಸಲು ಭಾನುವಾರ ಸಂಜೆ ನೀರು ಬಿಸಿ ಮಾಡಿಸಲು ವಾಟರ್ ಹೀಟರ್ ತೆಗೆದುಕೊಂಡು ಮಹೇಶ್ ಬಾಬಬು ಹೋಗಿದ್ದರು. ವಾಟರ್ ಹೀಟರ್ ಬಕೆಟ್ ನಲ್ಲಿ ಹಾಕುವ ವೇಳೆ ಮೊಬೈಲ್ ಫೋನ್ ರಿಂಗ್ ಆಗಿದೆ.

ಮೊಬೈಲ್ ಫೋನ್ ತೆಗೆದುಕೊಳ್ಳುವಾಗ ಮೈಮರೆತು ಸ್ವಿಚ್ ಹಾಕಿದ್ದ ವಾಟರ್ ಹೀಟರ್ ಅನ್ನು ಬಕೆಟ್ ನಲ್ಲಿ ಹಾಕುವ ಬದಲು ತೋಳಿನ ಮಧ್ಯೆ ಇಟ್ಟುಕೊಂಡಿದ್ದಾರೆ. ಕೂಡಲೇ ಕರೆಂಟ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾತ್ ರೂಮ್ ನಲ್ಲಿ ಬಿದ್ದ ಶಬ್ಧ ಕೇಳಿ ಬಂದ ಕೂಡಲೇ ಪತ್ನಿ ದುರ್ಗಾದೇವಿ ದೌಡಾಯಿಸಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments