Friday, October 18, 2024
Google search engine
Homeಅಪರಾಧಹಣ ಕೊಡದ ಹೆತ್ತತಾಯಿಯ ತಲೆ ಕಡಿದ ಪಾಪಿ ಮಗ!

ಹಣ ಕೊಡದ ಹೆತ್ತತಾಯಿಯ ತಲೆ ಕಡಿದ ಪಾಪಿ ಮಗ!

ಹಣಕಾಸಿನ ವಿಷಯದಲ್ಲಿ ಉಂಟಾದ ಜಗಳದಲ್ಲಿ ಹೆತ್ತ ತಾಯಿಯ ತಲೆಯನ್ನು ಪಾಪಿ ಮಗ ಕಡಿದು ಹಾಕಿದ ಭೀಕರ ಘಟನೆ ತ್ರಿಪುರದಲ್ಲಿ ನಡೆದಿದೆ.

24 ವರ್ಷದ ಹರಿಚರಣ್ ಜಾರಾ 55 ವರ್ಷದ ತನ್ನ ತಾಯಿ ಪ್ರಭಾತಿ ಜಾರಾ ಅವರ ಮಾರಕಾಸ್ತ್ರದಿಂದ ಕಡಿದು ರುಂಡ-ಮುಂಡ ಬೇರ್ಪಡಿಸಿದ್ದಾನೆ.

ಹಣ ಕೊಡುವಂತೆ ಪೀಡಿಸುತ್ತಿದ್ದ ಮಗ ಹಣಕ್ಕಾಗಿ ತಾಯಿಯನ್ನು ಕೇಳಿದ್ದಾನೆ. ತಾಯಿ ಕೊಡಲ್ಲ ಅಂದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಲೆ ಮಾಡುವ ಹಂತಕ್ಕೆ ಹೋಗಿದೆ ಎಂದು ಕುಟುಂಬಸ್ಥರು ಘಟನೆಯನ್ನು ವಿವರಿಸಿದ್ದಾರೆ.

ಹರಿಚರನ್ ತಾಯಿಯ ತಲೆಕಡಿದು ಹತ್ಯೆ ಮಾಡಿದ್ದು, ಪೊಲೀಸರು ಹರಿಚರನ್ ನನ್ನು ಬಂಧಿಸಿದ್ದು ಕೊಲೆಗೆ ಬಳಸಿದ ಮಾರಕಾಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪ್ರಭಾತಿ ಅವರ ದೇಹದ ರಕ್ತದ ಮಡುವಿನಲ್ಲಿತ್ತು. ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments