Monday, September 16, 2024
Google search engine
Homeತಾಜಾ ಸುದ್ದಿ40 ದಿನದಲ್ಲಿ 7 ಬಾರಿ ಪ್ರತಿ ಶನಿವಾರ ಕಚ್ಚುವ ಹಾವು: ಅಚ್ಚರಿಗೊಳಗಾದ ವೈದ್ಯರು!

40 ದಿನದಲ್ಲಿ 7 ಬಾರಿ ಪ್ರತಿ ಶನಿವಾರ ಕಚ್ಚುವ ಹಾವು: ಅಚ್ಚರಿಗೊಳಗಾದ ವೈದ್ಯರು!

ಕಳೆದ 40 ದಿನದಲ್ಲಿ ವ್ಯಕ್ತಿಯೊಬ್ಬನಿಗೆ ಹಾವೊಂದು ಹುಡುಕಿಕೊಂಡು ಬಂದು 7 ಬಾರಿ ಕಚ್ಚುತ್ತಿದೆ. ವಿಶೇಷ ಅಂದರೆ ಪ್ರತಿ ಶನಿವಾರ ಬಂದು ಹಾವು ಕಚ್ಚುತ್ತಿರುವುದು!

ಹೌದು, ಉತ್ತರ ಪ್ರದೇಶದ 24 ವರ್ಷದ ಯುವಕ ವಿಕಾಸ್ ದುಬೆ ಎಂಬಾತನಿಗೆ ಹಾವು ಪ್ರತಿ ಶನಿವಾರ ಬಂತೆಂದರೆ ಹುಡುಕಿಕೊಂಡು ಬಂದು ಕಚ್ಚುತ್ತಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದು, ಶನಿವಾರವೇ ಏಕೆ ಕಚ್ಚುತ್ತಿದೆ ಎಂದು ಗೊಂದಲಕ್ಕೀಡಾಗಿದ್ದಾರೆ.

ಹಾವು ಕಚ್ಚಿಸಿಕೊಂಡಾಗಲೆಲ್ಲಾ ಚಿಕಿತ್ಸೆ ಪಡೆದು ಹಣ ಖರ್ಚು ಮಾಡಿರುವ ವಿಕಾಸ್ ಇದೀಗ ಹಾವು ಕಚ್ಚಿದಾಗಲೆಲ್ಲಾ ಚಿಕಿತ್ಸೆ ಪಡೆಯಲು ಹಣಕಾಸಿನ ನೆರವು ನೀಡುವಂತೆ ವೈದ್ಯರಿಗೆ ಮೊರೆ ಹೋಗಿದ್ದಾನೆ.

ಹಾವು ಕಚ್ಚಿದಾಗ ಖಾಸಗಿ ಆಸ್ಪತ್ರೆಗೆ ಹೋಗದೇ ಸರ್ಕಾರಿ ಆಸ್ಪತ್ರೆಗೆ ಹೋದರೆ ಉಚಿತ ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿ ಕಳುಹಿಸಿದ್ದೇನೆ. ಏಕೆಂದರೆ ಪ್ರತಿ ಶನಿವಾರ ಹಾವು ಹೇಗೆ ಕಚ್ಚುತ್ತದೆ ಎಂಬುದೇ ನಮಗೆ ಅಚ್ಚರಿಗೆ ಕಾರಣವಾಗಿದೆ ಎಂದು ಫತೇಪುರ್ ಜಿಲ್ಲಾ ವೈದ್ಯಾಧಿಕಾರಿ ರವಿ ನಯನ್ ಗಿರಿ ತಿಳಿಸಿದ್ದಾರೆ.

ವಿಶೇಷ ಅಂದರೆ ಯುವಕ ಪ್ರತಿ ಶನಿವಾರವೇ ಹಾವು ಕಚ್ಚಿದೆ ಎಂದು ಹೇಳಿ ಒಂದೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾನೆ. ಮತ್ತು ಒಂದೇ ದಿನದಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗುತ್ತಾನೆ. ಇದು ಹೇಗೆ ಸಾಧ್ಯ ಎಂಬುದು ನಮಗೆ ಅನುಮಾನಕ್ಕೆ ಕಾರಣವಾಗಿದೆ. ಇದನ್ನು ನಾವು ಪತ್ತೆ ಹಚ್ಚಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಪ್ರತಿ ಶನಿವಾರ ಹಾವು ಒಬ್ಬನೇ ವ್ಯಕ್ತಿಗೆ ಹೇಗೆ ಕಚ್ಚುತ್ತದೆ ಎಂದು ತಿಳಿಯಲು ರವಿ ನಯನ್ ಗಿರಿ ಮೂವರು ವೈದ್ಯರ ತಂಡವನ್ನು ತನಿಖೆ ಮಾಡಲು ರಚನೆ ಮಾಡಿದ್ದಾರೆ. ಇವರು ವರದಿ ನೀಡಿದ ನಂತರ ಜನರಿಗೆ ಸತ್ಯ ತಿಳಿಸಲು ಮನಸ್ಸು ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments