Thursday, September 19, 2024
Google search engine
Homeತಾಜಾ ಸುದ್ದಿಮದರಸಾಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ಮೂಲಭೂತ ಹಕ್ಕುಗಳ ಉಲ್ಲಂಘನೆ: ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ

ಮದರಸಾಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ಮೂಲಭೂತ ಹಕ್ಕುಗಳ ಉಲ್ಲಂಘನೆ: ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ

ಮದರಸಾಗಳಲ್ಲಿ ಮುಸ್ಲಿಮೇತರ ಮಕ್ಕಳನ್ನು ಇಟ್ಟುಕೊಳ್ಳುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ರಾಷ್ಟ್ರೀಯ ಮಕ್ಕಳ ರಕ್ಷಣೆ ಮತ್ತು ಮೂಲಭೂತ ಹಕ್ಕುಗಳ ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕನುಂಗೊ ಹೇಳಿದ್ದಾರೆ.

ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಕನುಂಗೊ, ಮದರಸಾಗಳಲ್ಲಿ ಮುಸ್ಲಿಮ್ ಸಮುದಾಯದ ಶಿಕ್ಷಣವನ್ನು ಭೋದಿಸಲಾಗುತ್ತದೆ ಇದು ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ. ಅದರಲ್ಲೂ ಹಿಂದು ಅಥವಾ ಮುಸ್ಲಿಮೇತರ ಮಕ್ಕಳಿಗೆ ಶಿಕ್ಷಣ ನೀಡುವುದು ಸಂವಿಧಾನ ವಿರೋಧಿಯಾಗಿದೆ.

ಮುಸ್ಲಿಮೇತರ ಮಕ್ಕಳನ್ನು ಮದರಸಾಗಳಲ್ಲಿ ಇರಿಸಿಕೊಂಡು ಅವರಿಗೆ ಇಸ್ಲಾಮಿಕ್ ಶಿಕ್ಷಣವನ್ನು ಭೋದಿಸುವುದು ಕೇವಲ ಸಂವಿಧಾನ ವಿರೋಧಿಯಲ್ಲ. ಬದಲಾಗಿ ಸಮಾಜದಲ್ಲಿ ದ್ವೇಷ ಬಿತ್ತನೆಗೆ ಕಾರಣವಾಗುತ್ತದೆ. ಆದ್ದರಿಂದ ರಾಜ್ಯ ಸರಕಾರಗಳು ಮದರಾಸಗಳಲ್ಲಿ ಮುಸ್ಲಿಮೇತರ ಮಕ್ಕಳು ಸೇರದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮದರಾಸಗಳಲ್ಲಿ ಮುಸ್ಲಿಮ್ ಶಿಕ್ಷಣದ ಜೊತೆಗೆ ಸಂವಿಧಾನದ ಮೂಲ ಆಶಯದ ಶಿಕ್ಷಣವನ್ನೂ ನೀಡಲು ರಾಜ್ಯ ಸರಕಾರಗಳು ಹೆಜ್ಜೆ ಮುಂದಿಡಬೇಕು ಎಂದು ಪ್ರಿಯಾಂಕ್ ಕನುಂಗೊ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments