Thursday, September 19, 2024
Google search engine
Homeತಾಜಾ ಸುದ್ದಿ32 ಕೋಟಿಗೆ ಮುಂಬೈನ ಬಂಗಲೆ ಮಾರಿದ ನಟಿ ಕಂಗನಾ ರಾಣವತ್!

32 ಕೋಟಿಗೆ ಮುಂಬೈನ ಬಂಗಲೆ ಮಾರಿದ ನಟಿ ಕಂಗನಾ ರಾಣವತ್!

ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣವತ್ ಮುಂಬೈನ ಬಾಂದ್ರಾದಲ್ಲಿರುವ ತಮ್ಮ 32 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಮಾರಾಟ ಮಾಡಿದ್ದಾರೆ.

ಕಂಗನಾ ರಾಣವತ್ ಬಾಂಧ್ರಾದ ಪಾಲಿ ಹಿಲ್ ಪ್ರದೇಶದಲ್ಲಿರುವ ಬಂಗಲೆಯಲ್ಲಿ 2017 ಸೆಪ್ಟೆಂಬರ್ ನಲ್ಲಿ 20.7 ಕೋಟಿ ರೂ.ಗೆ ಖರೀದಿಸಿದ್ದರು. ನಂತರ ಈ ಬಂಗಲೆಯನ್ನು ಮಣಿಕರ್ಣಿಕ ಚಿತ್ರದ ಕಚೇರಿಯಾಗಿ ಬದಲಾಯಿಸಿದ್ದರು.

2022 ಡಿಸೆಂಬರ್ ನಲ್ಲಿ ಈ ಬಂಗಲೆ ಮೇಲೆ ಕಂಗನಾ 27 ಕೋಟಿ ರೂ. ಬ್ಯಾಂಕ್ ಸಾಲ ಮಾಡಿದ್ದರು. ಈಗಾಗಲೇ ಬ್ಯಾಂಕ್ ಸಾಲದ ಶೇ.55ರಷ್ಟನ್ನು ಪಾವತಿಸಿದ್ದರು. ಇದೀಗ ವಾರ್ಷಿಕ 6.5ರ ಏರಿಕೆ ಆಧರಿಸಿ ಬಂಗಲೆಯನ್ನು 32 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.

ಈ ಕಟ್ಟಡ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದು, ಮುಂಬೈ ಮಹಾನಗರ ಪಾಲಿಕೆ ಕಟ್ಟಡ ಅಕ್ರಮವಾಗಿ ಒತ್ತುವರಿ ಮಾಡಿದ ಜಾಗದಲ್ಲಿ ಹೆಚ್ಚುವರಿ ಜಾಗ ಆಕ್ರಮಿಸಿಕೊಂಡು ನಿರ್ಮಿಸಲಾಗಿದೆ ಎಂದು ನೆಲಸಮಕ್ಕೆ ಮುಂದಾಗಿತ್ತು. ಕಂಗನಾ ಹೈಕೋರ್ಟ್ ಮೊರೆ ಹೋಗಿದ್ದು, ತಮ್ಮ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ಬಂಗಲೆಯನ್ನು ಉಳಿಸಿಕೊಂಡಿದ್ದರು.

ಇತ್ತೀಚೆಗೆ ಕಂಗನಾ ನಟಿಸಿದ ಚಿತ್ರಗಳು ಒಂದರ ಹಿಂದೆ ಒಂದರಂತೆ ವಿಫಲವಾಗುತ್ತಿವೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಕುರಿತ ಚಿತ್ರ ವಿಫಲವಾಗಿತ್ತು. ಇದೀಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ಮೊದಲ ಬಾರಿಗೆ ನಟಿಸಿ ನಿರ್ದೇಶಿಸುತ್ತಿರುವ ಎಮರ್ಜೆನ್ಸಿ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದು, ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕಂಗನಾ ಬಂಗಲೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments