Friday, September 20, 2024
Google search engine
Homeಅಪರಾಧಎಚ್ಚರ ಬೆಂಗಳೂರಿಗೆ ಕಾಲಿಟ್ಟಿದೆ ಗುಮ್ಮಾ ಗ್ಯಾಂಗ್: ಒಂದೇ ದಿನದಲ್ಲಿ 2 ಎಟಿಎಂನಿಂದ ಕಳವು

ಎಚ್ಚರ ಬೆಂಗಳೂರಿಗೆ ಕಾಲಿಟ್ಟಿದೆ ಗುಮ್ಮಾ ಗ್ಯಾಂಗ್: ಒಂದೇ ದಿನದಲ್ಲಿ 2 ಎಟಿಎಂನಿಂದ ಕಳವು

ಉತ್ತರ ಭಾರತದಿಂದ ಚೆಡ್ಡಿ ಗ್ಯಾಂಗ್, ಮಿರ್ಚಿ ಗ್ಯಾಂಗ್.. ಹೀಗೆ ಗ್ಯಾಂಗ್ ಗಳ ಹಾವಾಳಿ ಹೆಚ್ಚಾಗುತ್ತಿರುವಂತೆಯೇ ಇದೀಗ ಬೆಂಗಳೂರಿಗೆ ಗುಮ್ಮಾ ಗ್ಯಾಂಗ್ ಕಾಲಿಟ್ಟಿದ್ದು, ಒಂದೇ ದಿನ ಎರಡು ಎಟಿಎಂಗಳಲ್ಲಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದೆ.

ಬೆಡ್ ಶೀಟ್ ಸುತ್ತಿಕೊಂಡು ಎಟಿಎಂ ಒಳಗೆ ಪ್ರವೇಶಿಸುವ ಈ ಗ್ಯಾಂಗ್, ಸಿಸಿ ಕ್ಯಾಮರಾಗೆ ಕಪ್ಪು ಸ್ಪ್ರೇ ಸಿಂಪಡಿಸಿ ಎಟಿಎಂನಲ್ಲಿರುವ ಹಣವನ್ನು ದೋಚಿ ಪರಾರಿಯಾಗುತ್ತಾರೆ. ಬೆಳ್ಳಂದೂರು ಹಾಗೂ ಹೊಸೂರಿನ ಎಟಿಎಂನ ಎಟಿಎಂಗಳಲ್ಲಿ ಲಕ್ಷಾಂತರ ರೂ ಗಳನ್ನು ಗುಮ್ಮಾ ಗ್ಯಾಂಗ್ ದೋಚಿ ಪರಾರಿಯಾಗಿದೆ.

ಎಟಿಎಂ ಒಳಗೆ ಬೆಡ್ ಶೀಟ್ ಸುತ್ತಿಕೊಂಡು ಬಂದ ದುಷ್ಕರ್ಮಿಗಳು ಮೊದಲಿಗೆ ಸಿಸಿಟಿವಿ ಕ್ಯಾಮರಾಗೆ ಕಪ್ಪು ಸ್ಪ್ರೇ ಹೊಡೆಯುತ್ತಾರೆ. ನಂತರ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರವನ್ನು ದೋಚುತ್ತಾರೆ. ಈ ರೀತಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂನಿಂದ 16,56,800 ರೂ. ದೋಚಿದ್ದಾರೆ.

ಜುಲೈ 6ರಂದು ಈ ಘಟನೆ ನಡೆದಿದ್ದು ಬೆಳ್ಳಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ಅದೇ ದಿನ ಹೊಸೂರಿನಲ್ಲೂ ಇದೇ ಮಾದರಿಯ ಕೃತ್ಯ ನಡೆದಿತ್ತು. ಈ ಹಿನ್ನಲೆ ಹೊರ ರಾಜ್ಯದಿಂದ ಬಂದ ಕಳ್ಳರು ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಹೊಸೂರು ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments