Friday, October 4, 2024
Google search engine
Homeತಾಜಾ ಸುದ್ದಿದರೋಡೆಕೋರರನ್ನು ಬೆಂಬತ್ತಿದ ಕೆನಡಾ ಪೊಲೀಸರು: ಭಾರತದ 3 ತಿಂಗಳ ಮೊಮ್ಮಗು, ವೃದ್ದ ದಂಪತಿ ಸಾವು

ದರೋಡೆಕೋರರನ್ನು ಬೆಂಬತ್ತಿದ ಕೆನಡಾ ಪೊಲೀಸರು: ಭಾರತದ 3 ತಿಂಗಳ ಮೊಮ್ಮಗು, ವೃದ್ದ ದಂಪತಿ ಸಾವು

ಮದ್ಯದ ಅಂಗಡಿಯ ದರೋಡೆಕೋರರನ್ನು ಬೆಂಬತ್ತಿದ ಕೆನಡಾ ಪೊಲೀಸರು ರಾಂಗ್ ರೂಟ್ ನಲ್ಲಿ ಬಂದಿದ್ದರಿಂದ 3 ತಿಂಗಳ ಮೊಮ್ಮಗು ಜೊತೆ ಪ್ರವಾಸಕ್ಕೆ ತೆರಳಿದ್ದ ವೃದ್ದ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕೆನಡಾ ಪ್ರವಾಸಕ್ಕೆ ಕುಟುಂಬ ತೆರಳಿದ್ದು, ಭೀಕರ ರಸ್ತೆ ದುರಂತದಲ್ಲಿ 3 ತಿಂಗಳ ಮೊಮ್ಮಗು ಹಾಗೂ ವೃದ್ದ ದಂಪತಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ದರೋಡೆಕೋರರು ಸಹ ಮೃತಪಟ್ಟಿದ್ದಾರೆ ಎಂದು ಒರಾಂಡೊ ಪೊಲೀಸರು ವಿವರಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಭಾರತದಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬದ ಜೊತೆಗಿದ್ದ 60 ವರ್ಷದ ವೃದ್ಧ ಹಾಗೂ 55 ವರ್ಷದ ವೃದ್ದೆ ಆಗಿದ್ದಾರೆ. ಅಲೆಕ್ಸ್ ನಲ್ಲಿ ವಾಸವಾಗಿರುವ ಭಾರತದ 33 ವರ್ಷದ ತಂದೆ ಹಾಗೂ 27 ವರ್ಷದ ತಾಯಿ ಗಾಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೊಮ್ವಿಲ್ಲೆಯಲ್ಲಿ ದರೋಡೆಕೋರರು ಮದ್ಯದ ಅಂಗಡಿ ದೋಚಿ ಪರಾರಿಯಾಗುತ್ತಿದ್ದರು. ಈ ವೇಳೆ ಒರಾಂಡೊ ಪೊಲೀಸರು ಕಾರಿನಲ್ಲಿ ಚೇಸ್ ಮಾಡುತ್ತಿದ್ದು, ರಾಂಗ್ ರೂಟ್ ನಲ್ಲಿ ಚೇಸ್ ಮಾಡುವಾಗ ಸರಣಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments