Tuesday, June 18, 2024
Google search engine
Homeಕ್ರೀಡೆಅಶ್ವಿನ್ ಮಿಂಚು: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನಿಂಗ್ಸ್, 64 ರನ್ ಜಯ, 4-1ರಿಂದ ಸರಣಿ ವಶ

ಅಶ್ವಿನ್ ಮಿಂಚು: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನಿಂಗ್ಸ್, 64 ರನ್ ಜಯ, 4-1ರಿಂದ ಸರಣಿ ವಶ

ಸ್ಪಿನ್ನರ್ ಆರ್.ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್ ನಲ್ಲಿ 195 ರನ್ ಗೆ ಆಲೌಟಾಗಿದೆ. ಭಾರತ ತಂಡ ಇನಿಂಗ್ಸ್ ಹಾಗೂ 64 ರನ್ ಗಳ ಭಾರೀ ಅಂತರದಿಂದ ಜಯ ಸಾಧಿಸಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿದೆ.

ಧರ್ಮಶಾಲಾದಲ್ಲಿ ನಡೆದ ಪಂದ್ಯದ ಮೂರನೇ ದಿನವಾದ ಶನಿವಾರ 8 ವಿಕೆಟ್ ಗೆ 473 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 477 ರನ್ ಗೆ ಆಲೌಟಾಯಿತು. 250 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 195 ರನ್ ಗೆ ಪತನಗೊಂಡಿತು.

100ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 5 ವಿಕೆಟ್ ಪಡೆದು ಆಂಗ್ಲರನ್ನು ಬೇಟೆಯಾಡಿದರೆ, ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಜೋ ರೂಟ್ 78 ರನ್ ಬಾರಿಸಿ ಹೋರಾಟ ನಡೆಸಿದ್ದು ಫಲ ನೀಡಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments