ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಗಿದ್ದು, ಆರಂಭಿಕನಾಗಿ ನಾಥನ್ ಮೆಕ್ ಸ್ವೆನ್ನಿ ಅಚ್ಚರಿ ಆಯ್ಕೆಯಾಗಿದೆ.
ಡೇವಿಡ್ ವಾರ್ನರ್ ನಿವೃತ್ತಿ ನಂತರ ಆಸ್ಟ್ರೇಲಿಯಾ ತಂಡ ಆರಂಭಿಕ ಸ್ಥಾನದ ಕೊರತೆ ಎದ್ದು ಕಾಣುತ್ತಿದ್ದು, ಸ್ಟೀವನ್ ಸ್ಮಿತ್ ಆರಂಭಿಕ ಸ್ಥಾನ ಆಡಲು ಯತ್ನಿಸಿದರೂ ವಿಫಲರಾದರು.
ನವೆಂಬರ್ 22ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗೆ ಭಾನುವಾರ 13 ಆಟಗಾರರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ್ದು, ಆರಂಭಿಕನಾಗಿ ನಾಥನ್ ಮೆಕ್ ಸ್ವೆನ್ನಿ ಮತ್ತು ಜಾನ್ ಇಂಗ್ಲೀಸ್ ಸೇರ್ಪಡೆಯಾಗಿದ್ದಾರೆ.
ಉಸ್ಮಾನ್ ಖ್ವಾಜಾ ಜೊತೆ ನಾಥನ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದು, ಸ್ಟೀವನ್ ಸ್ಮಿತ್ ತಮ್ಮ ಎಂದಿನ ನಾಲ್ಕನೇ ಕ್ರಮಾಂಕಕ್ಕೆ ಮರಳಲಿದ್ದಾರೆ. ಭಾರತ ಎ ವಿರುದ್ಧದ ಪಂದ್ಯದಲ್ಲಿ ನಾಥನ್ 88 ರನ್ ಬಾರಿಸಿ ಗಮನ ಸೆಳೆದಿದ್ದರು.
ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಮೆಕ್ ಸ್ವೆನ್ನಿ, ಸ್ಕಾಟ್ ಬೋಲಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹಾಜ್ಲೆವುಡ್, ಟ್ರಾವಿಡ್ ಹೆಡ್, ಜೋಸ್ ಇಂಗ್ಲೀಸ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್, ಮಾರ್ನೂಸ್ ಲಬುಸ್ಕೇಂಜ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್.