Thursday, September 19, 2024
Google search engine
Homeತಾಜಾ ಸುದ್ದಿಹನಿಟ್ರ್ಯಾಪ್ ಮಾಡಿ ಬಾಂಗ್ಲಾದೇಶ ಸಂಸದ ಅನ್ವರುಲ್ ಕಗ್ಗೊಲೆ!

ಹನಿಟ್ರ್ಯಾಪ್ ಮಾಡಿ ಬಾಂಗ್ಲಾದೇಶ ಸಂಸದ ಅನ್ವರುಲ್ ಕಗ್ಗೊಲೆ!

ಭಾರತದಲ್ಲಿ ಕೊಲೆಯಾದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜಿಮ್ ಗೆ ಹನಿಟ್ರ್ಯಾಪ್ ಮೂಲಕ ದುಷ್ಕರ್ಮಿಗಳು ಖೆಡ್ಡಾ  ತೊಡಿದ್ದರು ಎಂಬುದು ಬೆಳಕಿಗೆ ಬಂದಿದ್ದು, ಹನಿಟ್ರ್ಯಾಪ್ ಮಾಡಿದ ಮಹಿಳೆಯನ್ನು ಬಾಂಗ್ಲಾದೇಶದ ಢಾಕಾದಲ್ಲಿ ಬಂಧಿಸಲಾಗಿದೆ.

ಹನಿಟ್ರ್ಯಾಪ್ ಮಾಡಿದ್ದ ಶೈಲಂತಿ ರೆಹಮಾನ್ ಎಂಬಾಕೆಯನ್ನು ಬಂಧಿಸಲಾಗಿದ್ದು, ಅನ್ವರುಲ್ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾದ ಅವಾಮಿ ಲೀಗ್ ಸಂಸದನ ಸ್ನೇಹಿತ ಅಕ್ತರುಜಾಮ್ ಅವರ ಗೆಳತಿ ಎಂದು ಗುರುತಿಸಲಾಗಿದೆ.

ಅಕ್ತರುಜಾಮ್ ಅಮೆರಿಕ ನಿವಾಸಿಯಾಗಿದ್ದು, ಈತ ಭಾರತದೊಳಗೆ ಅಕ್ರಮವಾಗಿ ವಲಸೆ ಹೋಗಿರುವ ವ್ಯಕ್ತಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಅನ್ವರುಲ್ ಅವರನ್ನು ಅಕ್ರಮ ವಲಸಿಗ ಭೀಕರವಾಗಿ ಕೊಲೆಗೈದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೋಲ್ಕತಾದ ವಿವಿದೆಡೆ ಬಿಸಾಡಿದ್ದ.

ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತಾಗೆ ಆಗಮಿಸಿದ್ದ ಬೆನ್ನಲ್ಲೇ ಅನ್ವರುಲ್ ಅಜಿಮ್ ನಾಪತ್ತೆಯಾಗಿದ್ದರು. ಪಶ್ಚಿಮ ಬಂಗಾಳ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು.

ತನಿಖೆ ನಡೆಸಿದ ಸಿಐಡಿ ಅನ್ವರುಲ್ ಅಜಿಮ್ ಅವರನ್ನು ಅಕ್ರಮ ವಲಸಿಗನನ್ನು ಬಂಧಿಸಿದ್ದಾರೆ. ಈತ ಅನ್ವರುಲ್ ಅವರನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ವಿವಿದೆಡೆ ಬಿಸಾಡಿದ್ದ ಎಂದು ತಿಳಿಸಿದೆ.

ಪ್ರಾಣಿಗಳನ್ನು ಕತ್ತರಿಸುವ ಕಟುಕನ ಕೆಲಸ ಮಾಡುತ್ತಿದ್ದ ಜಿಹಾದ್ ಹವಾಲ್ದಾರ್ ಅನ್ವರುಲ್ ಅವರನ್ನು ಹತ್ಯೆ ಮಾಡಿದ್ದು, ಈತ ಬಾಂಗ್ಲಾದೇಶದ ಖುಲಾನಾ ಜಿಲ್ಲೆಯ ಬಾರಖ್ ಪುರ್ ನಿವಾಸಿಯಾಗಿದ್ದು, ಅಕ್ರಮವಾಗಿ ಭಾರತದೊಳಗೆ ನುಸುಳಿ ಮುಂಬೈನಲ್ಲಿ ವಾಸವಾಗಿದ್ದ.

ಹವಾಲ್ದಾರ್ ನನ್ನು ಅವಾಮಿ ಲೀಗ್ ಸಂಸದ ಸ್ನೇಹಿತ ಕೆಲಸಕ್ಕೆ ಇಟ್ಟುಕೊಂಡಿದ್ದು, ಈತ ಅಮೆರಿಕದ ನಿವಾಸಿಯಾಗಿದ್ದಾನೆ. ಈತ ಎರಡು ತಿಂಗಳ ಹಿಂದೆಯಷ್ಟೇ ಕೋಲ್ಕತಾಗೆ ಭೇಟಿ ನೀಡಿದ್ದ ಎಂದು ಸಿಐಡಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments