ಅಮೆರಿಕದ ಸಂಗೀತ ಕಲಾವಿದನೊಬ್ಬ ತನ್ನಿಂದ ಗರ್ಭಿಣಿಯರಾದ ಐವರು ಗೆಳತಿಯರ ಜೊತೆ ಬೇಬಿ ಬಂಪ್ ಫೋಟೊ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗಿದೆ.
22 ವರ್ಷದ ಸಂಗೀತ ಕಲಾವಿದ ನ್ಯೂಯಾರ್ಕ್ ನ ಜೆಡ್ಡಿಯಿಂದ ಒಂದೇ ಬಾರಿಗೆ ಐವರು ಗೆಳತಿರು ಗರ್ಭಿಣಿ ಆಗಿದ್ದು, ಇವರೆಲ್ಲರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಐವರು ಗೆಳತಿಯರ ಪೈಕಿ ಲಿಜಿ ಅಶ್ಲೇಹ್ ಟಿಕ್ ಟಾಕ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಜನವರಿ 14ರಂದು ಗರ್ಭಿಣಿ ಗೆಳತಿಯರಿಗೆ ಪಾರ್ಟಿ ಇಟ್ಟುಕೊಂಡಿರುವುದಾಗಿ ಆಮಂತ್ರಣ ಮಾಡಿರುವ ಆಹ್ವಾನ ಪತ್ರಿಕೆಯನ್ನು ಲಿಜಿ ಆಶ್ಲೇಹ್ ಹಂಚಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ `ಸ್ವಾಗತ, ಲಿಟ್ಲ್ ಜೆಡ್ಡಿ ವಿಲ್ಸ್ 1-5’ ಎಂದು ಹಾಕಿಕೊಂಡಿದ್ದಾರೆ.
ನಾವು ಈಗ ಸೋದರಿ ಪತ್ನಿಯರು ಎಂದು ಅನಿಸುತ್ತಿದೆ ಎಂದು ಹೇಳಿಕೊಂಡಿದ್ದು, ಮತ್ತೊಂದು ಪೋಸ್ಟ್ ನಲ್ಲಿ ಐವರು ಗೆಳತಿಯರಾದ ಲಜಿ ಆಶ್ಲೇಹ್, ಬೊನ್ನಿ ಬಿ, ಕೀ ಮೇರಿ, ಜೈಲೆನಿ ವಿಲಾ, ಲೈನಾ ಕಾಲಿಫಾ ಗಲ್ಲಾಟಿ ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದರು. ಪರಸ್ಪರರನ್ನು ಒಪ್ಪಿಕೊಂಡಿದ್ದಾರೆ.
ನಮ್ಮ ಸುಂದರ ಕುಟುಂಬ ನೋಡಿ, ನಾವು ಎಲ್ಲಾ ತಾಯಂದಿರನ್ನು ಒಪ್ಪಿಕೊಂಡಿದ್ದೇವೆ. ನಮ್ಮ ಮಕ್ಕಳ ಜೀವನ ಹಾಳಾಗದಂತೆ ನೋಡಿಕೊಳ್ಳುತ್ತೇವೆ. ತಮ್ಮ ಹೆತ್ತವರು ಕೂಡ ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಲಿಜಿ ಹೇಳಿಕೊಂಡಿದ್ದಾರೆ.