Home ತಾಜಾ ಸುದ್ದಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಾರು ಡಿಕ್ಕಿ: ಬಿಜೆಪಿ ಕಾರ್ಯಕರ್ತ ಸಾವು

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಾರು ಡಿಕ್ಕಿ: ಬಿಜೆಪಿ ಕಾರ್ಯಕರ್ತ ಸಾವು

by Editor
0 comments

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಾರು ಡಿಕ್ಕಿ ಹೊಡೆದಿದ್ದರಿಂದ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸೋಮವಾರ ಸಂಭವಿಸಿದೆ.

ಕೆ.ಆರ್ ಪುರಂನ ಗಣೇಶ ದೇವಸ್ತಾನದ ಬಳಿ ಈ ಘಟನೆ ನಡೆದಿದ್ದು, ಸ್ಕೂಟರ್​ ಸವಾರ ಪ್ರಕಾಶ್ (35) ಮೃತಪಟ್ಟಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಅವರ ಸಿಬ್ಬಂದಿ ನಿಂತಿದ್ದ ಕಾರಿನ ಡೋರ್ ಒಪನ್ ಮಾಡಿದಾಗ ಹಿಂಬದಿಯಿಂದ ಬರುತ್ತಿದ್ದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಡಿಕ್ಕಿ ಹೊಡೆದು ಬಿದ್ದಿದ್ದಾರೆ.

ಪ್ರಕಾಶ್ ಕೆಳಗೆ ಬೀಳುತ್ತಿದ್ದಂತೆ ಹಿಂದೆ ಬರುತ್ತಿದ್ದ ಬಸ್​ ಅವರ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಕಾಶ್​ ಸಾವನ್ನಪ್ಪಿದ್ದಾರೆ. ಕೆಆರ್​ ಪುರಂ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ‌ ಶೋಭಾಕರಂದ್ಲಾಜೆ ಕೆ.ಆರ್ ಪುರಂ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದರು. ಅವರ ಕಾರನ್ನ ರಸ್ತೆ ಬದಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ಕಾರಿನ ಚಾಲಕ ಡೋರ್ ತೆಗೆದಿದ್ದು, ಹಿಂದೆಯಿಂದ ಬಂದ ಪ್ರಕಾಶ್​ಗೆ ಬಡಿದು ರಸ್ತೆಯ ಮೇಲೆ ಬಿದ್ದಿದ್ದಾರೆ.

banner

ಇದೇ ವೇಳೆ ಅಲ್ಲಿಗೆ ಖಾಸಗಿ ಬಸ್ ಅವರ ಮೇಲೆ ಹರಿದಿದೆ. ತಕ್ಷಣವೇ ಕಾರ್ಯಕರ್ತರು ಪ್ರಕಾಶ್​ರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್​ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಇದೊಂದು ಅನಿರೀಕ್ಷಿತ ಘಟನೆ, ನಾವೆಲ್ಲರೂ ಮುಂದೆ ಹೋಗಿದ್ದೆವು, ಕಾರು ರಸ್ತೆ ಬದಿಯಲ್ಲಿ ನಿಂತಿತ್ತು. ನಮ್ಮ ಕಾರ್ಯಕರ್ತ ಪ್ರಕಾಶ್ ಅವರು ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಅವರ ಮೇಲೆ ಬಸ್​ ಹರಿದಿದ್ದು, ಗಾಯಗೊಂಡಿದ್ದರು. ಆದರೆ ಅವರಿಗೆ ಯಾವ ರೀತಿ ಗಾಯವಾಗಿದೆ ಎಂಬುದು ಶವ ಪರೀಕ್ಷೆಯಿಂದ ತಿಳಿದುಬರಲಿದೆ. ತಕ್ಷಣವೇ ಪೋಸ್ಟ್ ಮಾರ್ಟಮ್​ ಮಾಡಲು ಪೊಲೀಸರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಯುಪಿಯ 3 ಡಿಗ್ರಿ ಪದವೀಧರ! ನಕಲಿ ಗ್ರಾಹಕರ ಸೋಗಿನಲ್ಲಿ ಮೀಶೋ ಕಂಪನಿಗೆ 5.50 ಕೋಟಿಗೆ ವಂಚನೆ: ಮೂವರು ಗುಜರಾತಿಗಳು ಅರೆಸ್ಟ್! ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ಶುಕ್ರವಾರಕ್ಕೆ ಮುಂದೂಡಿಕೆ ಯೂಟ್ಯೂಬ್ ನಲ್ಲಿ ಧರ್ಮ ಪ್ರಚಾರ: ಬಾಂಗ್ಲಾ ವಲಸಿಗರ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಬಹಿರಂಗ ಮಾಸಾಂತ್ಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ 371 ಹಾಸಿಗೆಯ ಜಯದೇವ ಆಸ್ಪತ್ರೆ ಲೋಕಾಪರ್ಣೆ: ಡಾ.ಶರಣಪ್ರಕಾಶ್ ಪಾಟೀಲ್ 1,10,000 ಕೋಟಿ ರೂ. ತೆರಿಗೆ ಸಂಗ್ರಹಿಸಿ ದಾಖಲೆ ಬರೆದ ಕರ್ನಾಟಕ! IRCTC ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ರೈಲು ವಿಳಂಬವಾದರೆ ಉಚಿತ ಆಹಾರ! ವಿರಾಟ್ ಕೊಹ್ಲಿ 2ನೇ ಟೆಸ್ಟ್ ನಿಂದ ಹೊರಗೆ? ಅನುಮಾನ ಮೂಡಿಸಿದ ಕಾಲಿನ ಬ್ಯಾಂಡೇಜ್! ಟಿ-20ಯಲ್ಲಿ ಅತ್ಯಂತ ವೇಗದ `ಡಬಲ್' ಶತಕದ ವಿಶ್ವದಾಖಲೆ ಬರೆದ ಉರ್ವಿಲ್ ಪಟೇಲ್! ಕುತ್ತಿಗೆಗೆ ಬೋರ್ಡ್ ನೇತಾಕಿಕೊಂಡು ದೇವಸ್ಥಾನದಲ್ಲಿ ತಟ್ಟೆ ತೊಳೆದ ಪಂಜಾಬ್ ಮಾಜಿ ಡಿಸಿಎಂ!