Friday, October 18, 2024
Google search engine
Homeತಾಜಾ ಸುದ್ದಿBREAKING ಚೆನ್ನೈನಲ್ಲಿ ಮೈಸೂರು ದರ್ಬಾಂಗ-ಗೂಡ್ಸ್ ರೈಲುಗಳ ನಡುವೆ ಭೀಕರ ರೈಲು ಢಿಕ್ಕಿ

BREAKING ಚೆನ್ನೈನಲ್ಲಿ ಮೈಸೂರು ದರ್ಬಾಂಗ-ಗೂಡ್ಸ್ ರೈಲುಗಳ ನಡುವೆ ಭೀಕರ ರೈಲು ಢಿಕ್ಕಿ

ಮೈಸೂರು- ದರ್ಬಾಂಗ ರೈಲು ಮತ್ತು ಗೂಡ್ಸ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಭೀಕರ ಘಟನೆ ಚೆನ್ನೈನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೈಸೂರು ದರ್ಬಾಂಗ ನಡುವೆ ಸಂಚರಿಸುವ ರೈಲು ಕಾವರೈಪಟ್ಟಿ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. 12 ಬೋಗಿಗಳು ಹಳಿ ತಪ್ಪಿವೆ.

ಆಯುಧಪೂಜೆ ದಿನವಾದ ಶುಕ್ರವಾರ ಬೆಳಿಗ್ಗೆ 12578 ಬೆಳಿಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟ್ಟಿದ್ದ ರೈಲು ಚೆನ್ನೈ ಮೂಲಕ ದರ್ಬಾಂಗ ಭಾಗಮತಿಗೆ ತಲುಪಬೇಕಿತ್ತು.

ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ದೌಡಾಯಿಸಿದ್ದು, 5 ಬೋಗಿಗಳು ಹಳಿ ತಪ್ಪಿದ್ದು, ಸಾವು-ನೋವಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments