ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮೊದಲ ಆಯ್ಕೆಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉಳಿಸಿಕೊಂಡಿದೆ. ಈ ಮೂಲಕ 2025ರ ಆವೃತ್ತಿಯ ಐಪಿಎಲ್ ನಲ್ಲಿ ಧೋನಿ ಆಡುವುದು ಧೃಡಪಟ್ಟಂತಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಈ ವಿಷಯವನ್ನು ದೃಢಪಡಿಸಿದ್ದು, ಧೋನಿ ಮತ್ತೊಂದು ಆವೃತ್ತಿಯಲ್ಲಿ ಆಡುವುದಾಗಿ ದೃಢಪಡಿಸಿದ್ದಾರೆ. ಇದು ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ ಎಂದರು.
ಎರಡನೇ ಆಯ್ಕೆಯಾಗಿ ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಸಿಎಸ್ ಕೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ಆಲ್ ರೌಂಡರ್ ರವೀಂದ್ರ ಜಡೇಜಾ ಆಯ್ಕೆ ಬಗ್ಗೆ ಗೊಂದಲ ಮುಂದುವರಿದಿದ್ದು, ಅವರ ಲಭ್ಯತೆ ಬಗ್ಗೆ ಇನ್ನೂ ದೃಢಪಡಿಸಿಲ್ಲ. ಒಂದು ವೇಳೆ ಅವರು ಆಯ್ಕೆಗೆ ಲಭ್ಯರಿದ್ದರೆ ಸಂತೋಷ ಎಂದು ಅವರು ಹೇಳಿದರು.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವೃತ್ತಿಪರ ಕ್ರಿಕೆಟ್ ನಲ್ಲಿ ಆಡುವುದು ಕೇವಲ ಆಟ ಮಾತ್ರ ಆಗಿರಲ್ಲ. ಕೆಲವು ವಿಷಯಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಈ ಬಾರಿಯೂ ಐಪಿಎಲ್ ನಲ್ಲಿ ಆಡಲು ಕಳೆದ 8 ತಿಂಗಳಿಂದ ಫಿಟ್ನೆಸ್ ಕಡೆ ಗಮನ ಹರಿಸಿದ್ದೇನೆ ಎಂದು ಧೋನಿ ಹೇಳಿದ್ದರು.