Saturday, July 6, 2024
Google search engine
Homeತಾಜಾ ಸುದ್ದಿಪಾಕಿಸ್ತಾನಕ್ಕಿಂತ ಭಾರತದ ಬಳಿ ಹೆಚ್ಚು ನ್ಯೂಕ್ಲಿಯರ್ ಶಸ್ತ್ರಾಸ್ತ್ರ: ಸಜ್ಜಾಗಿ ನಿಂತಿವೆ ಚೀನಾದ 500 ಸಿಡಿತಲೆಗಳು!

ಪಾಕಿಸ್ತಾನಕ್ಕಿಂತ ಭಾರತದ ಬಳಿ ಹೆಚ್ಚು ನ್ಯೂಕ್ಲಿಯರ್ ಶಸ್ತ್ರಾಸ್ತ್ರ: ಸಜ್ಜಾಗಿ ನಿಂತಿವೆ ಚೀನಾದ 500 ಸಿಡಿತಲೆಗಳು!

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ ಹೆಚ್ಚು ಅಣುಬಾಂಬ್ ಹೊತ್ತೊಯ್ಯುವ ಸಾಮರ್ಥ್ಯದ ಕ್ಷಿಪಣಿಗಳು ಇವೆ. ಭಾರತಕ್ಕೆ ಹೋಲಿಸಿದರೆ ಚೀನಾ ಬಳಿ ಹೆಚ್ಚು ಅಣು ಶಸ್ತ್ರಾಸ್ತ್ರಗಳಿದ್ದು, ಯಾವುದೇ ಕ್ಷಣದಲ್ಲಿ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸಲು 500 ಕ್ಷಿಪಣಿಗಳು ಸಜ್ಜಾಗಿ ನಿಂತಿವೆ.

ಜಗತ್ತಿನಲ್ಲಿ ಕಳೆದೆರಡು ವರ್ಷಗಳಿಂದ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಹಂತದಲ್ಲಿ ಮೂರನೇ ಮಹಾಯುದ್ಧ ನಡೆಯಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಸ್ವೀಡನ್ ನ ಚಿಂತನಾ ಚಾವಡಿ ಅಣು ಬಾಂಬ್ ಹೊಂದಿರುವ 9 ರಾಷ್ಟ್ರಗಳ ವರದಿ ಬಿಡುಗಡೆ ಮಾಡಿದೆ.

ಇಡೀ ಜಗತ್ತಿಗೆ ಮಾರಕವಾದ ಅಣು ಶಸ್ತ್ರಾಸ್ತ್ರವನ್ನು ಭಾರತ, ಚೀನಾ, ಪಾಕಿಸ್ತಾನ, ಅಮೆರಿಕ, ರಷ್ಯಾ, ಉತ್ತರ ಕೊರಿಯಾ, ಬ್ರಿಟನ್, ಫ್ರಾನ್ಸ್ ಮತ್ತು ಇಸ್ರೇಲ್ ಸೇರಿದಂತೆ 9 ರಾಷ್ಟ್ರಗಳು ಹೊಂದಿವೆ.

2024ರ ವೇಳೆಗೆ ಭಾರತ 172 ಅಣು ಬಾಂಬ್ ಹಾಗೂ ಸಿಡಿತಲೆಗಳನ್ನು ಹೊಂದಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ 2 ಹೆಚ್ಚು ಅಣು ಬಾಂಬ್ ಗಳಿವೆ. 2023ರಲ್ಲಿ ಭಾರತ ದೊಡ್ಡ ಮಟ್ಟದಲ್ಲಿ ಅಣು ಬಾಂಬ್ ಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ ಎಂದು ವರದಿ ಹೇಳಿದೆ.

ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ದೇಶಗಳು ಅಣುಬಾಂಬ್ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅಮೆರಿಕ ಮತ್ತು ರಷ್ಯಾವನ್ನು ಅನುಸರಿಸುತ್ತಿವೆ. ಭಾರತದ ಭೀತಿಯಿಂದಾಗಿ ಪಾಕಿಸ್ತಾನ ಹೆಚ್ಚು ಅಣು ಬಾಂಬ್ ಹೊಂದಿಕೊಂಡಿದೆ.

ಚೀನಾ 2023ರಲ್ಲಿ 400 ಅಣುಬಾಂಬ್ ಗಳನ್ನು ಹೊಂದಿದ್ದು 2024ರ ವೇಳೆಗೆ 500ಕ್ಕೆ ಹೆಚ್ಚಿಸಿಕೊಂಡಿದೆ. ಜಗತ್ತಿನ ಶೇ.90ರಷ್ಟು ಅಣುಬಾಂಬ್ ಗಳು ಅಮೆರಿಕ ಮತ್ತು ರಷ್ಯಾ ಬಳಿ ಇವೆ. ಈ ಎರಡೂ ದೇಶಗಳಲ್ಲಿ ಒಟ್ಟಾರೆ 2100 ಅಣುಬಾಂಬ್ ಇವೆ ಎಂದು ವರದಿ ವಿವರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments