Thursday, September 19, 2024
Google search engine
Homeತಾಜಾ ಸುದ್ದಿಬೆಂಗಳೂರಿನಲ್ಲಿ ಸಿನಿಮಾ ಕೊರಿಯೊಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್: ತೆಲುಗು ಚಿತ್ರರಂಗದಿಂದ ಅಮಾನತು!

ಬೆಂಗಳೂರಿನಲ್ಲಿ ಸಿನಿಮಾ ಕೊರಿಯೊಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್: ತೆಲುಗು ಚಿತ್ರರಂಗದಿಂದ ಅಮಾನತು!

ಸಹದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಖ್ಯಾತ ತೆಲುಗು ಸಿನಿಮಾ ಕೊರಿಯೊಗ್ರಾಫರ್ ಜಾನಿ ಮಾಸ್ಟರ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಹಲವಾರು ಜನಪ್ರಿಯ ಗೀತೆಗಳಿಗೆ ಸ್ಟಾರ್ ನಟರಿಗೆ ನೃತ್ಯ ಸಂಯೋಜನೆ ಮಾಡಿರುವ ಜಾನಿ ಮಾಸ್ಟರ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಹೈದರಾಬಾದ್ ಗೆ ಕರೆದೊಯ್ಯಲಾಗಿದೆ.

ಜಾನಿ ಮಾಸ್ಟರ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ಬೆನ್ನಲ್ಲೇ ತೆಲುಗು ಚಿತ್ರರಂಗದಿಂದ ಅಮಾನತು ಮಾಡಿ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳು ಆದೇಶ ಹೊರಡಿಸಿದೆ.

ಹೈದರಾಬಾದ್, ಮುಂಬೈ ಸೇರಿದಂತೆ ವಿವಿಧೆಡೆ ಚಿತ್ರೀಕರಣದ ವೇಳೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 21 ವರ್ಷದ ಸಹ ಡ್ಯಾನ್ಸರ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಎಫ್ ಐಆರ್ ದಾಖಲಿಸುತ್ತಿದ್ದಂತೆ ದೂರು ವಾಪಸ್ ಪಡೆಯದಿದ್ದರೆ ಹಲ್ಲೆ ಮಾಡುವುದಾಗಿ ಜಾನಿ ಮಾಸ್ಟರ್ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧಿಸಲಾಗಿದೆ.

ಜಾನಿ ಮಾಸ್ಟರ್ ಈಗಾಗಲೇ ಮದುವೆ ಆಗಿದ್ದರೂ ಮದುವೆ ಆಗುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ದೂರು ನೀಡಿದ್ದಕ್ಕಾಗಿ ಜಾನಿ ಮಾಸ್ಟರ್ ಮತ್ತು ಪತ್ನಿ ನನ್ನ ಕೊಠಡಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದರು.

ಹಿಂದಿಯಲ್ಲಿ ಸಲ್ಮಾನ್ ನಟಿಸಿದ ಕಿಸಿ ಕಿ ಭಾಯ್, ಕಿಸಿ ಕಿ ಜಾನ್ ಚಿತ್ರ, ಬಾಹುಬಲಿ, ಪುಷ್ಪಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಜಾನಿ ಮಾಸ್ಟರ್ ಕೊರಿಯೊಗ್ರಾಫ್ ಮಾಡಿದ್ದು, ಚಿರಂಜೀವಿ, ಜೂನಿಯರ್ ಎನ್ ಟಿಆರ್, ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments