Friday, October 4, 2024
Google search engine
Homeತಾಜಾ ಸುದ್ದಿಎನ್ ಡಿಎ ಮೈತ್ರಿ ಯಶಸ್ಸಿಗೆ ಒಮ್ಮತ ಅಗತ್ಯ: ಪ್ರಧಾನಿ ಮೋದಿ ಅಭಿಮತ

ಎನ್ ಡಿಎ ಮೈತ್ರಿ ಯಶಸ್ಸಿಗೆ ಒಮ್ಮತ ಅಗತ್ಯ: ಪ್ರಧಾನಿ ಮೋದಿ ಅಭಿಮತ

ಮೈತ್ರಿ ನಿಭಾಯಿಸುವಲ್ಲಿ ಎನ್ ಡಿಎ ಯಾವಾಗಲೂ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಮೈತ್ರಿ ಪಕ್ಷಗಳಲ್ಲಿ ಒಮ್ಮತ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಸಂಸತ್ ಭವನದಲ್ಲಿ ಎನ್ ಡಿಎ ಮೈತ್ರಿಕೂಟ ಸಭೆಯಲ್ಲಿ ಮಾತನಾಡಿದ ಅವರು, ಎನ್ ಡಿಎ ಮೈತ್ರಿ ಸರ್ಕಾರ 5 ವರ್ಷ ಪೂರೈಸಲು ಒಮ್ಮತ ಅಗತ್ಯ ಎಂದು ಒತ್ತಿ ಹೇಳಿದರು.

ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್ ಡಿಎ ಮೈತ್ರಿಕೂಟದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ರಾಷ್ಟ್ರಪತಿಗೆ ಇಂದು ಸಂಜೆಯೊಳಗೆ ಸರ್ಕಾರ ರಚನೆಯ ಹಕ್ಕು ಮಂಡಿಸುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments