Monday, September 16, 2024
Google search engine
Homeತಾಜಾ ಸುದ್ದಿಅಪಘಾತಕ್ಕೀಡಾದ ಕಾರು: ಹಾರಾಡಿದ ಕೋಟ್ಯಂತರ ರೂಪಾಯಿ ನೋಟುಗಳು!

ಅಪಘಾತಕ್ಕೀಡಾದ ಕಾರು: ಹಾರಾಡಿದ ಕೋಟ್ಯಂತರ ರೂಪಾಯಿ ನೋಟುಗಳು!

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಹಣದ ಹಂಚಿಕೆ ಬೆಳಕಿಗೆ ಬಂದಿದೆ. ವಿಶೇಷ ಅಂದರೆ ಕಾರು ಪಲ್ಟಿ ಹೊಡೆದಿದ್ದರಿಂದ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ನೋಟುಗಳು ಗಾಳಿಯಲ್ಲಿ ಹಾರಾಡಿವೆ.

ಹೌದು, ಆಂಧ್ರಪ್ರದೇಶದ ಅನಂತಪಲ್ಲಿಯ ನಲ್ಲಜರಲಾ ಮಂಡಲ್ ನಲ್ಲಿ ಈ ಘಟನೆ ನಡೆದಿದ್ದು, ಲಾರಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿ ಹೊಡೆದಿದ್ದರಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ 7 ಕೋಟಿ ರೂ. ಪತ್ತೆಯಾಗಿದೆ. ಇದೀಗ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಡಿಕ್ಕಿ ಹೊಡೆದ ಕಾರಿನಲ್ಲಿ 7 ಬಾಕ್ಸ್ ಗಳಲ್ಲಿ ನೋಟುಗಳ ಕಂತೆ ಪತ್ತೆಯಾಗಿದ್ದು ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಗಿಸುತ್ತಿದ್ದ 7 ಕೋಟಿ ರೂ. ವಶಕ್ಕೆ ಪಡೆದು ಚುನಾವಣಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments