Monday, September 16, 2024
Google search engine
Homeತಾಜಾ ಸುದ್ದಿದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ತರುಣ್- ನಟಿ ಸೋನಾಲ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ತರುಣ್- ನಟಿ ಸೋನಾಲ್!

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಭಾನುವಾರ ಬೆಳಿಗ್ಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಭಾನುವಾರ ಬೆಳಿಗ್ಗೆ 10.40 ಶುಭ ಮುಹೂರ್ತದಲ್ಲಿ ಸೋನಾಲ್ ಗೆ ತರುಣ್ ಸುಧೀರ್ ತಾಳಿ ಕಟ್ಟುವ ಮೂಲಕ ಹೊಸ ಬಾಳು ಆರಂಭಕ್ಕೆ ಹೊಸ ಹೆಜ್ಜೆ ಇರಿಸಿದರು.

ಚಿನ್ನದ ಬಣ್ಣದ ಕುರ್ತ-ಪಂಚೆ ಧರಿಸಿದ್ದ ತರುಣ್ ಸುಧೀರ್ ಮತ್ತು ಕೆಂಪು ಮತ್ತು ಬಿಳಿ ಮಿಶ್ರಿತ ಸೀರೆ ಧರಿಸಿದ್ದ ಸೋನಾಲ್ ವಧು-ವರರಾಗಿ ಮಿಂಚುತ್ತಿದ್ದರು. ತುರಣ್ ತಾಳಿ ಕಟ್ಟುವ ವೇಳೆ ಸೋನಾಲ್ ಭಾವುಕರಾಗಿ ಕಣ್ಣೀರು ಹಾಕಿದರು.

ಮದುವೆ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರಾದ ನೆನಪಿರಲಿ ಪ್ರೇಮ್, ಶ್ರುತಿ, ಪ್ರೇಮಾ ಸೇರಿದಂತೆ ಹಲವು ದಿಗ್ಗಜರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments