ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಇದ್ದರೂ ರಾಜಾತಿಥ್ಯ ಅನುಭವಿಸುತ್ತಿದ್ದ ನಟ ದರ್ಶನ್ ಅವರನ್ನು ಮಾತ್ರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ ಜೈಲನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಉದ್ದೇಶ ಕುತೂಹಲದ್ದಾಗಿದೆ.
ಹೌದು, ನಟ ದರ್ಶನ್ ವಿರುದ್ಧ ಪದೇಪದೆ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ದರ್ಶನ್ ಅವರನ್ನು ಮೆಚ್ಚಿಸಲು ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿತ್ತು. ಜೈಲಲ್ಲಿರುವ ಇತರೆ ರೌಡಿಗಳು ಕೂಡ ಸಹವಾಸಕ್ಕಾಗಿ ಮುಗಿಬಿದ್ದಿದ್ದರು. ಇದರಿಂದ ಸಾಮಾನ್ಯ ಕೈದಿಗಳಿಗಿಂತ ಭಿನ್ನವಾದ ಸೌಲಭ್ಯವನ್ನು ದರ್ಶನ್ ಪಡೆಯುತ್ತಿದ್ದರು.
ದರ್ಶನ್ ರಾಜಾತಿಥ್ಯದಿಂದ ತೀವ್ರ ಮುಜುಗರಕ್ಕೀಡಾಗಿರುವ ರಾಜ್ಯ ಸರ್ಕಾರ, ದರ್ಶನ್ ಅವರನ್ನು ಬಳ್ಳಾರಿ ಜೈಲಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಪೊಲೀಸರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಬಳ್ಳಾರಿ ಜೈಲಿಗೆ ವರ್ಗಾಯಿಸಲು ಸಮ್ಮತಿ ಸೂಚಿಸಿದೆ.
ನಟೋರಿಯಸ್ ಸೆಲ್ ಗೆ ದರ್ಶನ್
ಅತ್ಯಂತ ಕ್ರೂರ ಹಾಗೂ ನಟೋರಿಸ್ ಅಪರಾಧಿಗಳಿಗೆ ಅಂತಲೇ ಬಳ್ಳಾರಿ ಜೈಲ್ ನಲ್ಲಿ ಸೆಲ್ ಇದೆ. ನಟೋರಿಯಸ್ ಸೆಲ್ ಎಂದೇ ಹೆಸರಾಗಿರುವ ಸೆಲ್ ನಲ್ಲಿ ದರ್ಶನ್ ಅವರನ್ನು ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಗತ್ತಿನ ಯಾವುದೇ ಭಾಗದಲ್ಲೂ ಇಲ್ಲದಂತಹ ನಟೋರಿಯಸ್ ಸೆಲ್ ಇದಾಗಿದ್ದು, ಈ ಸೆಲ್ ಗೆ ಹೋಗಲು ಕೈದಿಗಳು ಭಯ ಬೀಳುತ್ತಾರಂತೆ. ಯಾವುದೇ ಸೆಲ್ ಆದರೂ ಪರ್ವಾಗಿಲ್ಲ. ಈ ಸೆಲ್ ಬೇಡ ಎಂದು ಅಧಿಕಾರಿಗಳ ಬಳಿ ಕೈದಿಗಳು ದುಂಬಾಲು ಬೀಳುತ್ತಾರಂತೆ. ಅಂಥಾ ನಟೋರಿಸ್ ಸೆಲ್ ಸುಮಾರು ಸಮಯದಿಂದ ತೆರಿದಲ್ಲ. ಈಗ ಆ ಸೆಲ್ ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಈ ನಟೋರಿಯಸ್ ಸೆಲ್ ನಲ್ಲಿ ಸಹಕೈದಿಗಳ ಸಹವಾಸವೇ ಇರಲ್ಲವಂತೆ. ಒಬ್ಬ ಕೈದಿಯೂ ಮಾತನಾಡಲು ಸಿಗದೇ ಒಂಟಿಯಾಗಿ ವರ್ಷಗಳ ಕಾಲ ಇರಬೇಕಾಗುತ್ತದೆ. ಈ ಸೆಲ್ ನಲ್ಲಿ ಹಾಕಿದರೆ ಎಂಥಹ ಕೈದಿಯಾದರೂ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ ಎಂದು ಹೇಳಲಾಗಿದೆ.
ಬಿಸಿಲಿಗೆ ಕರಗಲಿದೆ ಕೊಬ್ಬು!
ಬಳ್ಳಾರಿ ಮೊದಲೇ ಬಿಸಿಲಿಗೆ ಹೇಳಿ ಮಾಡಿಸಿದ ಊರು. ಇಲ್ಲಿನ ಹಿಂಡಲಗಾ ಜೈಲಂತೂ ಕಾದ ಕೆಂಡದಂತೆ ಇರುತ್ತದೆ. ಇಲ್ಲಿನ ಬಿಸಿಲಿಗೆ ಕೈದಿಗಳಿಗೆ ಶಿಕ್ಷೆ ನೀಡುವ ಅಗತ್ಯವೇ ಇಲ್ಲ. ಏಕೆಂದರೆ ಎಂತಹ ಕೈದಿಯೂ ಕೂಡ ರಣಬಿಸಿಲಿನ ಹೊಡೆತಕ್ಕೆ ಕೊಬ್ಬು ಕರಗುತ್ತದೆ ಎಂದು ಹೇಳಲಾಗುತ್ತದೆ.
ರಾಜ್ಯದಲ್ಲೇ ಅತ್ಯಂತ ರಣಬಿಸಿಲಿಗೆ ಬಳ್ಳಾರಿ ಜೈಲು ಹೆಸರುವಾಸಿಯಾಗಿದ್ದು, ಕೈದಿಗಳು ಬಿಸಿಲಿಗೆ ಅರ್ಧ ಕರಗಿ ಹೋಗುತ್ತಾರೆ. ಅಲ್ಲದೇ ಇದೀಗ ದರ್ಶನ್ ರಾಜಾತಿಥ್ಯದ ಆರೋಪದಿಂದ ಅಧಿಕಾರಿಗಳು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಸಿಸಿಟಿವಿಗಳನ್ನು ದುರಸ್ಥಿ ಮಾಡಲು ಸೂಚಿಸಲಾಗಿದ್ದು, ಹೊಸದಾಗಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೇ ಅಧಿಕಾರಿಗಳು ನಿಯಮ ಮೀರದಂತೆ ಡಿಜಿಪಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್ ಹೇಗೆ ಇರುತ್ತಾರೆ ಎಂಬುದೇ ಕುತೂಹಲದ ವಿಷಯವಾಗಿದೆ.