Thursday, November 21, 2024
Google search engine
Homeಆರೋಗ್ಯಮಳೆಗಾಲದಲ್ಲಿ ಸಿಗುವ ಸಿಗಡಿ, ಮೀನಿನ ಆಹಾರ ಸೇವಿಸಬಾರದು: ಯಾಕೆ ಗೊತ್ತಾ?

ಮಳೆಗಾಲದಲ್ಲಿ ಸಿಗುವ ಸಿಗಡಿ, ಮೀನಿನ ಆಹಾರ ಸೇವಿಸಬಾರದು: ಯಾಕೆ ಗೊತ್ತಾ?

ಜಿಟಿ ಜಿಟಿ ಮಳೆ ಸುರಿಯುತ್ತಿರಬೇಕಾದರೆ, ಮನೆಯೊಳಗೆ ಬೆಚ್ಚಗೆ ಕುಳಿತು ಕರಿದ ಆಹಾರಗಳನ್ನು ಬಿಸಿ ಬಿಸಿಯಾಗಿ ತಿನ್ನುತಿರಬೇಕು ಅನ್ನೋ ಮನಸಾಗುತ್ತದೆ. ಆದರೆ ಮಳೆಗಾಲ ಇಂಥ ಆಸೆಗಳನ್ನು ತರುವ ಜೊತೆಗೆ ಬೆಟ್ಟದಷ್ಟು ಅನಾರೋಗ್ಯವನ್ನೂ ತರುತ್ತದೆ ಎನ್ನುವುದು ನೆನಪಿರಲಿ. ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಇನ್ನಿತರ ನೀರಿನಿಂದ ಬರುವ ರೋಗಗಳು ಕಾಲದಲ್ಲಿ ಹೆಚ್ಚಾಗಿ ನಮ್ಮನ್ನು ಕಾಡುತ್ತವೆ.

ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯೂ ಕಾಲಕ್ಕೆ ತಕ್ಕಂತೆ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ. ಹಾಗಾಗಿ ನಾವು ಯಾವಾಗಲೂ ನಮ್ಮ ದೇಹ ಕೊಡುವ ಸೂಚನೆಗಳ ಕಡೆ ಗಮನ ಕೊಟ್ಟು ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಸಮಯದಲ್ಲಿ ಸಿಗುವ ಹಣ್ಣು, ತರಕಾರಿ ಮತ್ತು ಇತರ ತಿನಿಸುಗಳನ್ನು ಸೇವಿಸಿವುದೂ ಅತ್ಯಗತ್ಯ.

ಇನ್ನು ಮಳೆಗಾಲದಲ್ಲಿ ಸೀಫುಡ್ ಅಂದರೆ ಮೀನು ತಿನ್ನುವವರು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ಸೀಫುಡ್ ಗಳಲ್ಲಿ ಮುಖ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುವುದು ಸಿಗಡಿ. ಅದರಲ್ಲಿ ಪ್ರೋಟೀನ್ ಶ್ರೀಮಂತವಾಗಿರುವುದರ ಜೊತೆಗೆ ರುಚಿಯಲ್ಲೂ ಅದಕ್ಕೆ ಸಾಟಿಯಿಲ್ಲ.ಈಗ ಶೀತಲೀಕರಣದ ವ್ಯವಸ್ಥೆಯಿಂದ ಎಲ್ಲಾ ಸೀಸನ್ ನಲ್ಲಿ ಎಲ್ಲಾ ತರಹದ ಆಹಾರಗಳೂ ಸಿಗುತ್ತವೆ.

ನಾವು ನಮ್ಮ ಆಸೆ, ರುಚಿಗೆ ಸ್ವಲ್ಪ ಕಡಿವಾಣ ಹಾಕಿ ಪ್ರಕೃತಿಯ ಬದಲಾವಣೆಗೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು.

ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಂತೆ ಸಮುದ್ರ ಜೀವಿಗಳೂ ಕೂಡ ಒಂದು ನಿಗದಿತ ಸಮಯದಲ್ಲಿ ತಮ್ಮ ಸಂತಾನೋತ್ಪತ್ತಿ ಕಾರ್ಯವನ್ನು ನಡೆಸುತ್ತವೆ. ಸಿಗಡಿ ಮತ್ತು ಇತರ ಮೀನುಗಳು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ನಾವು ಕಾಲದಲ್ಲಿ ಸಿಗಡಿ ತಿನ್ನದಿರುವುದು ಒಳಿತು.

ಮಳೆಗಾಲದಲ್ಲಿ ನೀರಿನಿಂದ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮೀನಿನ ಸೇವನೆ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ಕುಂಠಿತವಾಗುವುದರಿಂದ ನಾವು ಏನು, ಯಾವಾಗ ತಿನ್ನುತ್ತೇವೆ ಎಂದು ಅರಿತು ಅದನ್ನು ಪಾಲಿಸದಿದ್ದರೆ ಆಹಾರ ಜೀರ್ಣವಾಗದೆ ಆರೋಗ್ಯ ಸಮಸ್ಯೆಗಳು ಉಲ್ಬಣವಾಗಬಹುದು.

ಮೀನಿನಿಂದ ದೇಹಕ್ಕೆ ಅತ್ಯಗತ್ಯವಾದ ಒಮೇಗಾ – 3 ಮತ್ತು ಇತರ ಪೋಷಕಾಂಶಗಳು ಸಿಗುತ್ತವೆ. ಆದರೆ ಸಮಯದಲ್ಲಿ ಮೀನಿನ ಸೇವನೆಗೆ ಕಡಿವಾಣ ಹಾಕಿ ಅದರ ಬದಲು ಇದೇ ಪೋಷಕಾಂಶಗಳು ಇರುವ ಅವಕಾಡೋ, ಒಣಹಣ್ಣುಗಳನ್ನು ತಿನ್ನುವುದು ಒಳ್ಳೆಯದು.

ಭಾರತದಲ್ಲಿ ಮೊದಲಿನಿಂದಲೂ ನಮ್ಮ ಹಿರಿಯರು ಮಳೆಗಾಲದಲ್ಲಿ ಸಿಗಡಿ ತಿನ್ನಬಾರದೆಂದು ಹೇಳುತ್ತಾ ಬಂದಿದ್ದಾರೆ. ಅವರು ಯಾವುದೇ ವೈಜ್ಞಾನಿಕ ಕಾರಣ ಕೊಡದೇ ಇದ್ದರೂ ಮಳೆಗಾಲದಲ್ಲಿ ಸಿಗಡಿ ಸೇವನೆ ಆರೋಗ್ಯಕ್ಕೆ ಒಳಿತಲ್ಲ ಎನ್ನುವುದಂತೂ ಅವರಿಗೆ ಗೊತ್ತಿತ್ತು. ಆದರೆ ಈಗ ವೈಜ್ಞಾನಿಕವಾಗಿಯೂ ಇದು ಸರಿ ಎಂದು ಸಾಬೀತಾಗಿದೆ.ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಮೀನು ಒಂದು ಮೂಲ ಆಹಾಋ, ಅದರಲ್ಲೂ ಸಿಗಡಿ ಅಂತೂ ಅತೀ ಮುಖ್ಯವಾದುದು. ಆದರೆ ಹೋಟೇಲ್ ಮಾಲಿಕರು ಇದರ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಯನ್ನು ಕೊಡುವುದಿಲ್ಲ.ಅದರ ಬದಲುಮಳೆಗಾಲದಲ್ಲಿ ಸಿಗಡಿ ತಿನ್ನುವುದು ಬಿಡುವುದು ನಿಮ್ಮ ಮೇಲೆ ಬಿಟ್ಟಿದ್ದುಎಂದು ಜವಾಬ್ದಾರಿಯನ್ನು ಗ್ರಾಹಕರ ಮೇಲೆ ಹೊರಿಸಿ ಬಿಡುತ್ತದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments