Saturday, July 6, 2024
Google search engine
Homeತಾಜಾ ಸುದ್ದಿರಾಹುಲ್ ಗಾಂಧಿ ತರಹ ಆಡಬೇಡಿ: ಎನ್ ಡಿಎ ಸಂಸದರ ಸಭೆಯಲ್ಲಿ ಪ್ರಧಾನಿ ಕಿವಿಮಾತು!

ರಾಹುಲ್ ಗಾಂಧಿ ತರಹ ಆಡಬೇಡಿ: ಎನ್ ಡಿಎ ಸಂಸದರ ಸಭೆಯಲ್ಲಿ ಪ್ರಧಾನಿ ಕಿವಿಮಾತು!

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಡಿದಂತೆ ಲೋಕಸಭೆಯ ಕಲಾಪದ ವೇಳೆ ಆಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎನ್ ಡಿಎ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.

ಮಂಗಳವಾರ ನಡೆದ ಎನ್ ಡಿಎ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆಯಲ್ಲಿ ರಾಹುಲ್ ಗಾಂಧಿ ನಡೆದುಕೊಂಡಂತೆ ನೀವು ನಡೆದುಕೊಳ್ಳಬೇಡಿ. ಜವಾಹರ ಲಾಲ್ ನೆಹರು ನಂತರ ಸತತ ಮೂರು ಬಾರಿ ಚಹಾ ಮಾರುವ ವ್ಯಕ್ತಿ ಪ್ರಧಾನಿ ಆಗಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಎನ್ ಡಿಎ ಸಂಸದರು ಸಂಸತ್ ನಿಯಮವನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿ ಆಗಬೇಕು. ನಿಮ್ಮ ನಡವಳಿಕೆಯನ್ನು ಜನರು ಗಮನಿಸುತ್ತಿರುತ್ತಾರೆ. ರಾಹುಲ್ ಗಾಂಧಿ ಲೋಕಸಭೆ ಕಲಾಪದಲ್ಲಿ ನಡೆದುಕೊಂಡಂತೆ ನೀವು ನಡೆದುಕೊಳ್ಳಬೇಡಿ ಎಂದು ಪಾಠ ಮಾಡಿದ್ದಾರೆ.

ಮೂರನೇ ಬಾರಿ ಪ್ರಧಾನಿ ಆದ ನಂತರ ಮೊದಲ ಬಾರಿ ನಡೆದ ಆಡಳಿತಾರೂಢ ಸಂಸದರ ಸಭೆಯನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದರು. ನಂತರ ಸುದ್ದಿಗಾರರಿಗೆ ಸಭೆಯ ಮಾಹಿತಿಯನ್ನು ಸಂಸದೀಯ ಸಚಿವ ಕಿರಣ್ ರಿಜುಜು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments