Saturday, July 6, 2024
Google search engine
Homeತಾಜಾ ಸುದ್ದಿ12ನೇ ಮಗುವಿನ ತಂದೆಯಾಗಲಿರುವ ಇಲಾನ್ ಮಸ್ಕ್!

12ನೇ ಮಗುವಿನ ತಂದೆಯಾಗಲಿರುವ ಇಲಾನ್ ಮಸ್ಕ್!

ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ಟೆಲ್ಸಾ ಕಂಪನಿ ಮಾಲೀಕ ಇಲಾನ್ ಮಸ್ಕ್ ಮತ್ತು ನ್ಯೂರೆಲಿಂಕ್ ನಿರ್ದೇಶಕಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಇಲಾನ್ ಮಸ್ಕ್ ಒಟ್ಟಾರೆಯಾಗಿ 12ನೇ ಮಗುವಿನ ತಂದೆಯಾಗಲಿದ್ದಾರೆ.

ಇಲಾನ್ ಮಸ್ಕ್ ಮತ್ತು ನ್ಯೂರೆಲಿಂಕ್ ನಿರ್ದೇಶಕಿ ಶಿವೊನ್ ಸಿಲಿಸ್ ವರ್ಷಾಂತ್ಯದಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾಧ್ಯಮಗಳ ಈ ವರದಿಯನ್ನು ಟೆಲ್ಸಾ ಕಂಪನಿ ದೃಢಪಡಿಸಿದ್ದು, ನಾವು ಈ ವಿಷಯದಲ್ಲಿ ಮುಚ್ಚೆ ಮರೆ ಮಾಡುತ್ತಿಲ್ಲ ಎಂದು ತಿಳಿಸಿದೆ.

ನ್ಯೂರೆಲಿಂಕ್ ಕಂಪನಿ ಮೆದುಳು ಅಳವಡಿಸುವ ಪ್ರಯೋಗ ನಡೆಸುವ ಕಂಪನಿ ಆಗಿದೆ. ಮೂರನೇ ಮಗುವಿನ ತಂದೆ ಆಗುತ್ತಿರುವ ವಿಷಯವನ್ನು ಮಾಧ್ಯಮಗಳಿಗೆ ಪ್ರಕಟಣೆ ಮೂಲಕ ತಿಳಿಸಿಲ್ಲ. ಆದರೆ ಇದು ರಹಸ್ಯ ಅಲ್ಲ. ನನ್ನ ಎಲ್ಲಾ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ವಿಷಯ ತಿಳಿದಿದೆ ಎಂದು ಇಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.

ಮಗುವಿನ ಲಿಂಗ ಮತ್ತು ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಇಲಾನ್ ಮಸ್ಕ್ ಮತ್ತು ನ್ಯೂರೆಲಿಂಕ್ ನಿರ್ದೇಶಕಿ ಶಿವೊನ್ ಸಿಲಿಸ್ ಈಗಾಗಲೇ ಅವಳಿ-ಜವಳಿ ಮಕ್ಕಳು ಇದೆ.

ಶಿವೊನ್ ಸಿಲಿಸ್ ಮಗುವಿನ ಹೆರಿಗೆ ಸಮಯವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಅಲ್ಲದೇ ಮಸ್ಕ್ ಕೂಡ ಮಗುವಿನ ವಿಷಯದ ಕುರಿತು ಬಹಿರಂಗ ಚರ್ಚೆ ನಿರಾಕರಿಸಿದ್ದಾರೆ. ಆದರೆ ಇದು ಒಟ್ಟಾರೆಯಾಗಿ ಇಲಾನ್ ಮಸ್ಕ್ ಅವರ 12ನೇ ಮಗುವಾಗಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments