Saturday, October 19, 2024
Google search engine
Homeಕ್ರೀಡೆಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತ `ಎ’ಗೆ ರೋಚಕ 7 ವಿಕೆಟ್ ಜಯ

ಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತ `ಎ’ಗೆ ರೋಚಕ 7 ವಿಕೆಟ್ ಜಯ

ಸಂಘಟಿತ ಪ್ರದರ್ಶನ ನೀಡಿದ ಭಾರತ `ಎ’ ತಂಡ 7 ರನ್ ಗಳಿಂದ ಪಾಕಿಸ್ತಾನ ಶಹೀನ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಓಮನ್ ನ ಅರ್ಮೆತ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ 8 ವಿಕೆಟ್ ಕಳೆದುಕೊಂಡು 183 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ಶಹೀನ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಾಕಿಸ್ತಾನ ತಂಡ ಆರಂಭಿಕ ಆಘಾತಕ್ಕೆ ಒಳಗಾದರೂ ಮಧ್ಯಮ ಕ್ರಮಾಂಕದಲ್ಲಿ ಅರಫತ್ ಮಿನ್ಹಾಸ್ (41ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್), ಯಾಸಿರ್ ಖಾನ್ (33 ರನ್, 22 ಎಸೆತ, 1 ಬೌಂಡರಿ, 3 ಸಿಕ್ಸರ್), ಖಾಸಿಮ್ ಅಕ್ರಮ್ (27 ರನ್, 21 ಎಸೆತ, 4 ಬೌಂಡರಿ) ತಂಡವನ್ನು ಮುನ್ನಡೆಸಿದರೂ ಕೊನೆಯ ಹಂತದಲ್ಲಿ ವಿಕೆಟ್ ಕೈ ಚೆಲ್ಲಿದರು.

ಭಾರತದ ಪರ ಅನ್ಸುಲ್ ಕಮುಜ್ 3 ವಿಕೆಟ್ ಕಬಳಿಸಿದರೆ, ರಸೀಕ್ ಸಲೀಂ ಮತ್ತು ನಿಶಾಂತ್ ಸಿದು ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ಎ ತಂಡದ ಪರ ನಾಯಕ ತಿಲಕ್ ವರ್ಮಾ (44ರನ್, 35 ಎಸೆತ, 2 ಬೌಂಡರಿ, 2 ಸಿಕ್ಸರ್), ಪ್ರಭ್ ಸಿಮ್ರಾನ್ ಸಿಂಗ್ (36 ರನ್, 19 ಎಸೆತ, 3 ಬೌಂಡರಿ, 2 ಸಿಕ್ಸರ್), ಅಭಿಷೇಕ್ ಶರ್ಮ (35 ರನ್, 22 ಎಸೆತ, 5 ಬೌಂಡರಿ, 2 ಸಿಕ್ಸರ್) ಮತ್ತು ನೆಹಾಲ್ ವಧೇರಾ (25) ತಂಡಕ್ಕೆ ಭದ್ರ ಬುನಾದಿ ಹಾಕಿದರು. ಆದರೆ ನಂತರ ನಾಟಕೀಯ ಕುಸಿತ ಅನುಭವಿಸಿದ್ದರಿಂದ 200ರ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments