Thursday, October 31, 2024
Google search engine
Homeಕ್ರೀಡೆಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿದ ಮುಸುಕುಧಾರಿಗಳಿಂದ ದರೋಡೆ

ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿದ ಮುಸುಕುಧಾರಿಗಳಿಂದ ದರೋಡೆ

ಇಮಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿದ ಮುಸುಕುಧಾರಿಗಳ ಗುಂಪು ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದ ವೇಳೆ ಮುಸುಕುಧಾರಿಗಳು ಮನೆಗೆ ನುಗ್ಗಿ ಅಪರೂಪದ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ದಾಳಿಯ ವೇಳೆ ಮನೆಯೊಳಗೆ ಕುಟುಂಬದ ಸದಸ್ಯರು ಇದ್ದು, ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬೆಮ್ ಸ್ಟೋಕ್ಸ್ ಹೇಳಿದ್ದಾರೆ.

ಅಕ್ಟೊಬರ್ 17 ಗುರುವಾರ ಕ್ಯಾಸ್ಟನ್ ಈಡನ್ ಪ್ರದೇಶದಲ್ಲಿರುವ ಮನೆಗೆ ಮುಸುಕುಧಾರಿಗಳ ಗುಂಪು ನುಗ್ಗಿದೆ. ಈ ವೇಳೆ ಮನೆಯಲ್ಲಿ ಪತ್ನಿ ಕ್ಲಾರಿ, ಮಕ್ಕಳಾದ ಲೇಟನ್ ಮತ್ತು ಲಿಬ್ಬಿ ಇದ್ದರು ಎಂದು ಸ್ಟೋಕ್ಸ್ ವಿವರಿಸಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿ ವಿಷಯ ಬಹಿರಂಗಪಡಿಸಿರುವ ಸ್ಟೋಕ್ಸ್, ಮನೆಗೆ ನುಗ್ಗಿದ ಗುಂಪು ಆಭರಣ ಸೇರಿದಂತೆ ಕೆಲವು ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಇದರಲ್ಲಿ ಕುಟುಂಬ ಭಾವಾತ್ಮಕ ವಸ್ತುಗಳನ್ನು ಕದ್ದಿದ್ದಾರೆ. ಇವರನ್ನು ಹಿಡಿದು ಅಪರೂಪದ ವಸ್ತುಗಳನ್ನು ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಕುಟುಂಬದ ಸದಸ್ಯರಿಗೆ ಯಾವುದೇ ಹಾನಿ ಮಾಡದೇ ಇರುವುದಕ್ಕೆ ಧನ್ಯವಾಗಳು. ನಾನು ಕಳುವಾಗಿರುವ ವಸ್ತುಗಳ ಫೋಟೊ ಬಿಡುಗಡೆ ಮಾಡಿದ್ದು, ಇದರಿಂದ ವಸ್ತುಗಳನ್ನು ಗುರುತಿಸಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments