Friday, September 20, 2024
Google search engine
Homeಕ್ರೀಡೆಯುರೋ ಕಪ್‍ 2024: ಸ್ಪೇನ್ ಮಿಂಚಿನಾಟಕ್ಕೆ ಕ್ರೊವೇಶಿಯಾ ಸ್ಟನ್!

ಯುರೋ ಕಪ್‍ 2024: ಸ್ಪೇನ್ ಮಿಂಚಿನಾಟಕ್ಕೆ ಕ್ರೊವೇಶಿಯಾ ಸ್ಟನ್!

ಮಾಜಿ ಚಾಂಪಿಯನ್ ಸ್ಪೇನ್ ತಂಡ 3-1 ಗೋಲುಗಳಿಂದ ಯುರೋ ಕಪ್ 2024 ಪಂದ್ಯದಲ್ಲಿ ಕ್ರೊವೇಶಿಯಾ ತಂಡವನ್ನು ಸೋಲಿಸಿದೆ.

ಬರ್ಲಿನ್ ನಲ್ಲಿ ಶನಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಪರ ಅಲ್ವೆರೊ ಮೊರಾಟ (29ನೇ ನಿಮಿಷ), ಫ್ಯಾಬಿಯಾನ್ ರುಯೆಜ್ (32ನೇ ನಿಮಿಷ), ಡ್ಯಾನಿ ಕಾರ್ವಜಲ್ (45+22ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಕ್ರೊವೇಶಿಯಾ ಗೋಲು ಗಳಿಸಲು ವಿಫಲವಾಯಿತು.

ಕ್ರೊವೇಶಿಯಾ 2018ರ ವಿಶ್ವಕಪ್ ನಲ್ಲಿ ಫ್ರಾನ್ಸ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದಿದ್ದರೆ, ಎರಡು ವರ್ಷದ ಹಿಂದೆ ಕತಾರ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಸ್ಪೇನ್ 2012ರ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಮೊದಲ ಅವಧಿಯಲ್ಲೇ ಮುನ್ನಡೆ ಪಡೆದ ಸ್ಪೇನ್ ಮೇಲುಗೈ ಸಾಧಿಸಿದರೆ, ಎರಡನೇ ಅವಧಿಯಲ್ಲಿ ಎಚ್ಚೆತ್ತ ಕ್ರೊವೇಶಿಯಾ ಗೋಲು ಗಳಿಸಲು ಪ್ರಯತ್ನಿಸಿದರೂ ಸ್ಪೇನ್ ರಕ್ಷಣೆ ಹೆಚ್ಚಿಸಿಕೊಂಡು ಗೋಲು ಗಳಿಸಲು ಅವಕಾಶವನ್ನೇ ನೀಡಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments