Saturday, October 5, 2024
Google search engine
Homeಕ್ರೀಡೆಯುರೋ ಕಪ್: 3 ಪೆನಾಲ್ಟಿ ಗೋಲು ರಕ್ಷಿಸಿದ ಡೀಗೋ ಕೋಸ್ಟಾ, ಪೋರ್ಚುಗಲ್ ಕ್ವಾರ್ಟರ್ ಫೈನಲ್ ಗೆ!

ಯುರೋ ಕಪ್: 3 ಪೆನಾಲ್ಟಿ ಗೋಲು ರಕ್ಷಿಸಿದ ಡೀಗೋ ಕೋಸ್ಟಾ, ಪೋರ್ಚುಗಲ್ ಕ್ವಾರ್ಟರ್ ಫೈನಲ್ ಗೆ!

ಗೋಲ್ ಕೀಪರ್ ಡೀಗೋ ಕೋಸ್ಟಾ ಪೆನಾಲ್ಟಿ ಶೂಟೌಟ್ ಅನ್ನು ರಕ್ಷಿಸುವ ಮೂಲಕ ಪೋರ್ಚುಗಲ್ 3-0 ಗೋಲುಗಳಿಂದ ಸ್ಲೊವಾನಿಯಾ ವಿರುದ್ಧ ರೋಚಕ ಗೆಲುವಿನೊಂದಿಗೆ ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಮಂಗಳವಾರ ಮುಂಜಾನೆ ನಡೆದ 16ರ ಘಟ್ಟದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೊ ಹೆಚ್ಚುವರಿ ಆಟದಲ್ಲಿ ಪೆನಾಲ್ಟಿಯಲ್ಲಿ ಗೋಲು ಬಾರಿಸಲು ವಿಫಲವಾಗಿದ್ದರಿಂದ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ಡೀಗೋ ಕೋಸ್ಟಾ ಅದ್ಭುತವಾಗಿ 3 ಗೋಲು ರಕ್ಷಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅಪರೂಪ ಎಂಬಂತೆ ಹೆಚ್ಚುವರಿ ಆಟದಲ್ಲಿ ಪೆನಾಲ್ಟಿಯಲ್ಲಿ ಗೋಲು ಗಳಿಸಲು ವಿಫಲರಾದರು. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.

ಪೆನಾಲ್ಟಿ ಶೂಟೌಟ್ ನಲ್ಲಿ ರೊನಾಲ್ಡೊ, ಬ್ರುನೊ ಫೆರ್ನಾಂಡೀಸ್, ಸಿಲ್ವಾ ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಪೋರ್ಚಗುಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments