Saturday, July 6, 2024
Google search engine
Homeಕ್ರೀಡೆeuro cup: ರೊಮೆನಿಯಾ ಮಣಿಸಿದ ನೆದರ್ಲೆಂಡ್ಸ್ ಕ್ವಾರ್ಟರ್ ಫೈನಲ್ ಗೆ

euro cup: ರೊಮೆನಿಯಾ ಮಣಿಸಿದ ನೆದರ್ಲೆಂಡ್ಸ್ ಕ್ವಾರ್ಟರ್ ಫೈನಲ್ ಗೆ

ಡೊನೆಯೆಲ್ ಮಲೆನ್ ಸಿಡಿಸಿದ ಎರಡು ಗೋಲುಗಳ ಸಹಾಯದಿಂದ ರೊಮೆನಿಯಾ ತಂಡವನ್ನು ಸೋಲಿಸಿದ ನೆದರ್ಲೆಂಡ್ಸ್ ಯುರೋಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಮಂಗಳವಾರ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 3-0 ಗೋಲುಗಳಿಂದ ರೊಮೆನಿಯಾ ತಂಡವನ್ನು ನೆದರ್ಲೆಂಡ್ಸ್ ಸುಲಭವಾಗಿ ಮಣಿಸಿತು.

ಡೊನೆಯೆಲ್ ಮಲೆನ್ (83 ಮತ್ತು 90+3ನೇ ನಿಮಿಷ) ಎರಡು ಗೋಲು ಬಾರಿಸಿ ಮಿಂಚಿದರೆ, ಕೋಡಿ ಗಾಪ್ಕೊ (20ನೇ ನಿಮಿಷ) ಒಂದು ಗಳಿಸಿದರು.

ನೆದರ್ಲೆಂಡ್ಸ್ ತಂಡಕ್ಕೆ ಕೋಡಿ ಗಾಪ್ಕೊ ಮೊದಲ ಅವಧಿಯ ಆಟದಲ್ಲೇ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆದರೆ ಎರಡನೇ ಅವಧಿಯ ಆಟದ ಕೊನೆಯಲ್ಲಿ ಸತತ ಎರಡು ಗೋಲು ಸಿಡಿಸಿದ ಮಲೆನ್ ಪಂದ್ಯದಲ್ಲಿ ಮಿಂಚು ಹರಿಸಿದರು.

ರೊಮೆನಿಯಾ ನಿರಾಶಾದಾಯಕ ಪ್ರದರ್ಶನ ನೀಡಿ ಗೋಲು ಗಳಿಸಲು ವಿಫಲವಾಯಿತು. ಪಂದ್ಯದ ಕೊನೆಯವರೆಗೂ 1 ಗೋಲಿನಿಂದ ಹಿನ್ನಡೆ ಅನುಭವಿಸಿದ್ದರೂ ಸಮಬಲ ಗಳಿಸುವ ಅವಕಾಶ ಹೊಂದಿತ್ತು. ಆದರೆ ತಿರುಗೇಟು ನೀಡುವ ಬದಲು ಗೋಲು ಬಿಟ್ಟುಕೊಟ್ಟು ಟೂರ್ನಿಯಿಂದ ಹೊರಬಿದ್ದಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments