Saturday, July 6, 2024
Google search engine
Homeಕ್ರೀಡೆEuro cup: ವೆಗ್ ಹಾರ್ಟ್ಸ್ ಕೊನೆ ಕ್ಷಣದಲ್ಲಿ ಗೋಲು, ಪೋಲೆಂಡ್ ವಿರುದ್ಧ ನೆದರ್ಲೆಂಡ್ಸ್ ಗೆ ರೋಚಕ...

Euro cup: ವೆಗ್ ಹಾರ್ಟ್ಸ್ ಕೊನೆ ಕ್ಷಣದಲ್ಲಿ ಗೋಲು, ಪೋಲೆಂಡ್ ವಿರುದ್ಧ ನೆದರ್ಲೆಂಡ್ಸ್ ಗೆ ರೋಚಕ ಜಯ

ಬದಲಿ ಆಟಗಾರನಾಗಿ ಕಣಕ್ಕಿಳಿದ ವೌಟ್ ವೆಗ್ ಹಾರ್ಟ್ಸ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಗೋಲಿನಿಂದ ನೆದರ್ಲೆಂಡ್ಸ್ ತಂಡ 2-1 ರಿಂದ ಪೋಲೆಂಡ್ ತಂಡವನ್ನು ಸೋಲಿಸಿ ಯುಇಎಫ್ ಎ ಯುರೋ ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಹಂಬರ್ಗ್ ನಲ್ಲಿ ಭಾನುವಾರ ನಡೆದ ಡಿ ಗುಂಪಿನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ರೋಚಕ ಹಣಾಹಣಿಯಲ್ಲಿ 2-1ರಿಂದ ಜಯ ದಾಖಲಿಸಿತು. ನೆದರ್ಲೆಂಡ್ಸ್ ತಂಡದ ಪರ ಗೋಡಿ ಗಪ್ಕೊ (29ನೇ ನಿಮಿಷ) ಮತ್ತು ವೌಟ್ ವೆಗ್ ಹಾರ್ಟ್ಸ್ (83ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೆ, ಪೋಲೆಂಡ್ ಪರ ಆಡಂ ಬುಕ್ಸ (16ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

ಪೋಲೆಂಡ್ ತಂಡ ಆರಂಭದಲ್ಲೇ ಆಡಂ ಬುಕ್ಸ ಗಳಿಸಿದ ಗೋಲಿನ ನೆರವಿನಿಂದ ಉತ್ತಮ ಆರಂಭ ಪಡೆಯಿತಾದರೂ 13 ನಿಮಿಷಗಳ ಅಂತರದಲ್ಲಿ ಗೋಡಿ ಗಪ್ಕೊ ಗೋಲು ಬಾರಿಸಿ ಸಮಬಲದ ಗೌರವ ತಂದುಕೊಟ್ಟರು. ಪಂದ್ಯದ ಕೊನೆಯ ಕ್ಷಣದವರೆಗೂ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದರೂ ಕೊನೆಯ ಹಂತದಲ್ಲಿ ಬದಲಿ ಆಟಗಾರನಾಗಿ ಬಂದ ವೌಟ್ ವೆಗ್ ಹಾರ್ಟ್ಸ್ ಗೋಲು ಸಿಡಿಸಿ ನೆದರ್ಲೆಂಡ್ಸ್ ಗೆ ರೋಚಕ ಜಯ ತಂದುಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments