ಇತ್ತೀಚೆಗೆ ಅಗಲಿದ ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ 1996ರಲ್ಲಿ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಗೆ ಭಾರತಕ್ಕೆ ಅತ್ಯಂತ ಅಗತ್ಯವಾಗಿದ್ದ ಆರ್ಥಿಕ ಪುನಶ್ಚೇತನ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್ ಜಿಪಿ ಗ್ರೂಪ್ ಚೇರ್ ಮನ್ ಹರ್ಷ್ ಗೋಯೆಂಕಾ, ರತನ್ ಟಾಟಾ ಖುದ್ದು ಕೈಯಲ್ಲಿ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ಅದ್ಭುತ ವ್ಯಕ್ತಿಯಿಂದ ಅದ್ಭುತ ವ್ಯಕ್ತಿಗೆ ಬರೆದ ಪತ್ರ ಎಂದು ಶೀರ್ಷಿಕೆ ಹಾಕಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಪುನಶ್ಚೇತನ ನೀಡಿದ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನು ಆರ್ಥಿಕ ಪುನಶ್ಚೇತನದ ಹರಿಕಾರ ಎಂದು ಬಣ್ಣಿಸಿರುವ ರತನ್ ಟಾಟಾ, ನಿಮಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಋಣಿಯಾಗಿರಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ಜಗತ್ತಿಗೆ ತೆರೆದುಕೊಳ್ಳುವ ಮೂಲಕ ಆರ್ಥಿಕತೆ ಪುನಶ್ಚೇತನ ನೀಡಿದ ದೂರದೃಷ್ಟಿಯುಳ್ಳ ಪಿವಿ ನರಸಿಂಹ ರಾವ್ ಗೆ ಪ್ರತಿಯೊಬ್ಬ ಭಾರತೀಯ ಋಣಿಯಾಗಿರಬೇಕು ಮತ್ತು ಅವರು ಉತ್ಸವ ಮಾದರಿಯಾಗಿರಬೇಕು ಎಂದು ರತನ್ ಟಾಟಾ ಪತ್ರದಲ್ಲಿ ಬರೆದಿದ್ದಾರೆ.
1996, ಆಗಸ್ಟ್ 27ರಂದು ಟಾಟಾ ಗ್ರೂಪ್ ಮುಖ್ಯ ಕಚೇರಿ ಬಾಂಬೆ ಹೌಸ್ ನಲ್ಲಿ ಬರೆದಿರುವ ರತನ್ ಟಾಟಾ, ಪಿವಿ ನರಸಿಂಹ ರಾವ್ ಅವರಿಗೆ ವೈಯಕ್ತಿಕವಾಗಿ ಬರೆದಿದ್ದರು.
Beautiful writing from a beautiful person…. pic.twitter.com/AOxJPmVqNL
— Harsh Goenka (@hvgoenka) October 15, 2024