Thursday, September 19, 2024
Google search engine
Homeಕ್ರೀಡೆಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ಇನ್ನಿಲ್ಲ

ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ಇನ್ನಿಲ್ಲ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ಅಂಶುಮನ್ ಗಾಯಕ್ವಾಡ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗಾಯಕ್ವಾಡ್ ಕೆಲವು ತಿಂಗಳಿಂದ ಲಂಡನ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಢಯುತ್ತಿದ್ದರು.

ಆರ್ಥಿಕ ಮುಗ್ಗಟ್ಟಿನಿಂದ ಚಿಕಿತ್ಸೆ ಪಡೆಯಲು ಗಾಯಕ್ವಾಡ್ ಕುಟುಂಬ ಪರದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಆರ್ಥಿಕ ಸಹಾಯ ಮಾಡಿದ್ದರು. ಆದರೆ ಅದು ಸಾಲದ ಕಾರ ಕಪಿಲ್ ದೇವ್ ಬಿಸಿಸಿಗೆ ಮನವಿ ಮಾಡಿದ್ದರು.

ಕಪಿಲ್ ದೇವ್ ಮನವಿ ಬೆನ್ನಲ್ಲೇ ಬಿಸಿಸಿಐ 1 ಕೋಟಿ ರೂ. ನೆರವು ನೀಡಿತ್ತು. ಅಲ್ಲದೇ ಅಗತ್ಯಬಿದ್ದರೆ ಹೆಚ್ಚಿನ ನೆರವು ನೀಡುವುದಾಗಿ ಹೇಳಿತ್ತು.

ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಗಾಯಕ್ವಾಡ್ ನಿಧನರಾಗಿದ್ಸಾರೆ.

ಗಾಯಕ್ವಾಡ್ ಭಾರತ ತಂಡದ ಪರ 40 ಟೆಸ್ಟ್ ಹಾಗೂ 15 ಏಕದಿನ ಆಡಿದ್ದರು. ಅಲ್ಲದೇ 2000ನೇ ಸಾಲಿನ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments