Wednesday, July 3, 2024
Google search engine
Homeಕ್ರೀಡೆ4ನೇ ಮಹಡಿಯಿಂದ ಜಿಗಿದು ಕರ್ನಾಟಕದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಆತ್ಮಹತ್ಯೆ!

4ನೇ ಮಹಡಿಯಿಂದ ಜಿಗಿದು ಕರ್ನಾಟಕದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಆತ್ಮಹತ್ಯೆ!

ಭಾರತ ತಂಡದ ಮಾಜಿ ಆಟಗಾರ ಕರ್ನಾಟಕದ ಆಲ್ ರೌಂಡರ್ ಡೇವಿಡ್ ಜಾನ್ಸನ್ ಚಿಕ್ಕಬಳ್ಳಾಪುರದ ಅಪಾರ್ಟ್ ಮೆಂಟನ್ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ವರದಿಯಾಗಿದೆ.

ಕೊತ್ತನೂರಿನ ತಮ್ಮ ಅಪಾರ್ಟ್ ಮೆಂಟ್ ನ 4ನೇ ಮಹಡಿಯಿಂದ ಜಿಗಿದು 53 ವರ್ಷದ ಡೇವಿಡ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಭಾರತ ತಂಡದ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಡೇವಿಡ್ ಜಾನ್ಸನ್, 3 ವಿಕೆಟ್ ಪಡೆದಿದ್ದರು. ಅಲ್ಲದೇ ರಣಜಿ ಚಾಂಪಿಯನ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಡೇವಿಡ್ ಜಾನ್ಸನ್ ನಿಧನಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಆಘಾತ ವ್ಯಕ್ತಪಡಿಸಿದ್ದಾರೆ.

ಮೂಲತಃ ಹಾಸನದ ಅರಸೀಕೆರೆ ತಾಲೂಕಿನವರಾದ ಡೇವಿಡ್ ಜಾನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪರಿಣಾಮ ಬೀರುತ್ತಿರಲಿಲ್ಲ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments