ಮಾಜಿ ಸಚಿವ ಅನಿಲ್ ದೇಶ್ ಮುಖ್ ಅವರ ಕಾರಿನ ಮೇಲೆ ಕಲ್ಲುತೂರಾಟ ನಡೆಸಿದ್ದರಿಂದ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಸೋಮವಾರ ರಾತ್ರಿ ನಾಗ್ಪುರದ ಕಾಟೊಲ್-ಜಲಲ್ ಖೇಡಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಎನ್ ಸಿಪಿ ಮುಖಂಡನ ಕಾರು ಹೋದ ಸ್ವಲ್ಪ ಹೊತ್ತಿನಲ್ಲಿ ಅದೇ ಜಾಗದಲ್ಲಿ ಕಾರು ಬಂದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಅನಿಲ್ ದೇಶ್ ಮುಖ್ ಮಹಾ ವಿಕಾಸ್ ಅಂಗಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪುತ್ರನ ಪರ ನಾರ್ಕೆಡ್ ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂತಿರುಗುವಾಗಿ ಈ ಘಟನೆ ನಡೆದಿದೆ.
ದೇಶ್ ಮುಖ್ ಅವರ ಹಣೆಗೆ ಪೆಟ್ಟು ಬಿದ್ದು ರಕ್ರಸ್ತಾವವಾಗಿದ್ದು, ಕಣ್ಣು ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಕಿಟಕಿ ಗಾಜುಗಳು ಪುಡಿಯಾಗಿವೆ.