Tuesday, November 5, 2024
Google search engine
Homeಅಪರಾಧಕುಟುಂಬದ ನಾಲ್ವರಿಗೆ ಗುಂಡಿಟ್ಟು ಹತ್ಯೆಗೈದು ತಂದೆ ಆತ್ಮಹತ್ಯೆ!

ಕುಟುಂಬದ ನಾಲ್ವರಿಗೆ ಗುಂಡಿಟ್ಟು ಹತ್ಯೆಗೈದು ತಂದೆ ಆತ್ಮಹತ್ಯೆ!

ಪತ್ನಿ ಹಾಗೂ ಮೂವರು ಮಕ್ಕಳನ್ನು ಗುಂಡಿಟ್ಟು ಹತ್ಯೆಗೈದ ಪತಿಯ ಶವ ನಿರ್ಮಾಣ ಹಂತದ ಕಟ್ಟಡದ ಬಳಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಬಹದಾನಿ ಬಡಾವಣೆಯ ರಾಜೇಂದ್ರ ಗುಪ್ತ ಅವರ 20 ಬಾಡಿಗೆ ಮನೆಯ ವಠಾರದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ 45 ವರ್ಷದ ರಾಜೇಂದ್ರ ಗುಪ್ತ ಅವರ ಪತ್ನಿ ನೀತು, ನವನೇಂದ್ರ (25), ಗೌರಂಗಿ (16) ಮತ್ತು ಶುಭೇಂದ್ರ ಗುಪ್ತ (15) ಶವ ಪತ್ತೆಯಾಗಿದ್ದು, ಗುಂಡಿನ ಮಳೆಗೆರೆದು ಅವರನ್ನು ಹತ್ಯೆ ಮಾಡಲಾಗಿದ್ದು ಕಂಡು ಬಂದಿತ್ತ.

ರಾಜೇಂದ್ರ ಗುಪ್ತ ನಾಪತ್ತೆಯಾಗಿದ್ದರಿಂದ ಆತನಿಗಾಗಿ ಪೊಲೀಸರು ಶೋಧ ನಡೆಸಿದಾಗ ಕೆಲವು ಗಂಟೆಗಳ ನಂತರ ಅವರ ಶವ ನಿರ್ಮಾಣ ಹಂತದ ಕಟ್ಟಡ ಬಳಿ ಪತ್ತೆಯಾಗಿದೆ.

ರಾಜೇಂದ್ರ ಪತ್ನಿ ಹಾಗೂ ಮಕ್ಕಳನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಇದೇ ವೇಳೆ ವಠಾರದ ವೃದ್ದೆಯೊಬ್ಬರು ದಂಪತಿ ನಡುವೆ ಪದೇಪದೆ ಜಗಳ ಆಗುತ್ತಿತ್ತು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜೇಂದ್ರ ಮೇಲೆ ಹಲವು ಕೊಲೆ ಪ್ರಕರಣಗಳು ಇದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಅದು ಕೂಡ ತಂದೆ, ಸೋದರ ಸಂಬಂಧಿಗಳನ್ನು ಕೊಲೆ ಮಾಡಿದ ಗಂಭೀರ ಪ್ರಕರಣಗಳು ಇದ್ದವು. ರಾಜೇಂದ್ರಗೆ ನೀತು ಎರಡನೇ ಪತ್ನಿಯಾಗಿದ್ದರು. ಕಳೆದ ಒಂದು ವರ್ಷದಿಂದ ಗೌಪ್ಯ ಜಾಗದಲ್ಲಿದ್ದ ರಾಜೇಂದರ ದೀಪಾವಳಿ ಪ್ರಯುಕ್ತ ಮನೆಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments